ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ಮಸೂದೆ ಮಂಡನೆ: ಸರಕಾರಕ್ಕೆ ಸಂಕಷ್ಟ (Lokpal Bill | Anna Hazare | Manmohan Singh | Government | Parliament)
PTI
ಸುಮಾರು 42 ವರ್ಷಗಳ ನಂತರ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮೊದಲ ಬಾರಿಗೆ ಮಂಡಿಸಲಾಗುತ್ತಿದ್ದು, ಇಲ್ಲಿಯವರೆಗೆ ಒಂಬತ್ತು ಬಾರಿ ಸದನದಲ್ಲಿ ಮಂಡಿಸಲಾಗಿದೆ. ಸರಕಾರಿ ಲೋಕಪಾಲ ಮಸೂದೆಯನ್ನು ಬಹಿಷ್ಕರಿಸುವಂತೆ ಅಣ್ಣಾ ಹಜಾರೆ ಮನವಿ ಮಾಡಿದ್ದಾರೆ.

ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಇಂದು ಮಂಡಿಸುತ್ತಿರುವುದರಿಂದ, ಸರಕಾರದ ಮೇಲೆ ಹಿರಿಯ ಗಾಂಧಿವಾದಿ ಸಮಾಜ ಸುಧಾರಕ ಅಣ್ಣಾ ಹಜಾರೆ.ಸರಕಾರದ ಮೇಲೆ ಭಾರಿ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಡವರ, ಜನಸಾಮಾನ್ಯರ ವಿರೋಧಿಯಾದ ಸರಕಾರಿ ಲೋಕಪಾಲ ಮಸೂದೆಯನ್ನು ಬೆಂಬಲಿಸದಂತೆ ಅಣ್ಣಾ ಹಜಾರೆ, ಎಲ್ಲಾ ಸಂಸದರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕೇಂದ್ರ ಸರಕಾರ ಅಣ್ಣಾ ಹಜಾರೆಯವರಿಗೆ ಜಂತರ್ ಮಂಥರ್‌ನಲ್ಲಿ ಅಮರಣಾಂತ ನಿರಶನಕ್ಕೆ ಅನುಮತಿಯನ್ನು ನಿರಾಕರಿಸಿದೆ. ಆದರೆ, ಅಮರಣಾಂತ ನಿರಶನ ನಡೆಸಿಯೇ ತೀರುವುದಾಗಿ ಅಣ್ಣಾ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಜಂತರ್ ಮಂತರ್‌ನಲ್ಲಿ ಅಮರಣಾಂತ ನಿರಶನ ಕೈಗೊಳ್ಳಲು ಸರಕಾರ ಅನುಮತಿಯನ್ನು ನಿರಾಕರಿಸಿದಲ್ಲಿ ನ್ಯಾಯಾಲಯಕ್ಕೆ ಮೊರೆಹೋಗುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರವಿಂದ್ ಕೇಜ್ರಿವಾಲ್, ಹೌದು, ಅಗತ್ಯವಾದಲ್ಲಿ ನ್ಯಾಯಾಲಯಕ್ಕೆ ಮೊರೆಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಪಾಲ ಮಸೂದೆ, ಅಣ್ಣಾ ಹಜಾರೆ, ಮನಮೋಹನ್ ಸಿಂಗ್, ಸರಕಾರ, ಸಂಸತ್ತು