ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆಗೆ ವರುಣ್ ಆಫರ್;ನಮ್ಮ ಮನೆಯಲ್ಲಿ ನಿರಶನ ಮಾಡಿ (Varun gandhi | Anna Hazare | UPA government | Jan Lokpal Bill)
PTI
ಜನಲೋಕಪಾಲ ಮಸೂದೆ ಜಾರಿಗಾಗಿ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾಧಿ ಅಣ್ಣಾ ಹಜಾರೆಯವರಿಗೆ ಅಮರಣ ನಿರಶನ ನಡೆಸಲು ಕೇಂದ್ರ ಸರಕಾರ ಸಾರ್ವಜನಿಕ ಸ್ಥಳವನ್ನು ನೀಡದಿದ್ದಲ್ಲಿ, ನನ್ನ ಮನೆಯಲ್ಲಿ ಹಜಾರೆ ನಿರಶನ ಆರಂಭಿಸಬಹುದು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಜನಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಹಿಂಸಾ ಮಾರ್ಗದಲ್ಲಿ ಅಮರಣ ನಿರಶನ ಆರಂಭಿಸಲು ನಿರ್ಧರಿಸಿರುವ ಅಣ್ಣಾ ಹಜಾರೆಯವರಿಗೆ ಸಾರ್ವಜನಿಕ ಸ್ಥಳವನ್ನು ನಿರಾಕರಿಸುತ್ತಿರುವುದು ದುರದೃಷ್ಟಕರ ಸಂಗತಿ. ಸರಕಾರ ತಮ್ಮನ್ನು ಆಯ್ಕೆ ಮಾಡಿದ ಪ್ರಜೆಗಳ ವಿರುದ್ಧ ಸಮರಕ್ಕೆ ಸಿದ್ಧವಾಗಿರುವುದು ವಿಷಾದದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಸರಕಾರದಲ್ಲಿರುವ ಜನಪ್ರತಿನಿಧಿಗಳು ತಮ್ಮನ್ನು ಆಯ್ಕೆ ಮಾಡಿದ ಜನತೆಯ ಹಿತಾಸಕ್ತಿಗೆ ಬದ್ಧರಾಗಿರಬೇಕು. ಸಂಸದರು ಮತ್ತು ಸರಕಾರ ಜನತೆಯ ಪ್ರತಿನಿಧಿಗಳಾಗಿರಬೇಕು. ಅವರನ್ನು ಆಳುವ ರಾಜರಾಗಿರಬಾರದು. ಸರಕಾರ ಜಾರಿಗೊಳಿಸುವ ಸಾರ್ವಜನಿಕ ನೀತಿಗಳು ಮುಕ್ತವಾಗಿರಬೇಕು. ರಹಸ್ಯವಾಗಿ ಅಥವಾ ಒತ್ತಡದಿಂದ ಹೇರುವುದು ಸೂಕ್ತವಲ್ಲ ಎಂದು ಸಂಸದ ವರುಣ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರ ವಿರುದ್ಧ ದಾಳಿ ಮಾಡುವುದಾಗಲಿ ಅಥವಾ ಹೆದರಿಸುವುದಾಗಿ ಸರಿಯಲ್ಲ. ಸಾರ್ವಜನಿಕ ಬೆಂಬಲ ಪಡೆಯುವ ಬೇಡಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಅದನ್ನು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲಾಗದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಅಡಳಿತರೂಡ ಪಕ್ಷಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. 170,000 ಕೋಟಿ ರೂಪಾಯಿಗಳ ಹಗರಣ ಬೆಳಕಿಗೆ ಬಂದಿವೆ. ಇಲ್ಲಿಯವರೆಗೆ ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಆದರೆ, ಆರೋಪಿಗಳಿಗೆ ಯಾವುದೇ ಶಿಕ್ಷೆಯಾದ ಉದಾಹರಣೆಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಬದಲಾವಣೆಯ ಸಮಯವಾಗಿದೆ. ಸಶಕ್ತ, ಅರ್ಥಪೂರ್ಣವಾದಂತಹ ಜನಲೋಕಪಾಲ ಮಸೂದೆ ಜಾರಿ ಅಗತ್ಯವಾಗಿದೆ.ದೇಶದ ಪ್ರಧಾನಮಂತ್ರಿಯಿಂದ ಸಾಮಾನ್ಯ ಅಧಿಕಾರಿಯವರೆಗೆ ತನಿಖಾ ವ್ಯಾಪ್ತಿಯನ್ನು ಹೊಂದಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಸರಕಾರಿ ದುರ್ಬಲ ಲೋಕಪಾಲ ಮಸೂದೆ ಜಾರಿಗೆ ಸರಕಾರ ಪ್ರಯತ್ನಿಸುತ್ತಿದೆ. ಪ್ರಧಾನಮಂತ್ರಿ, ನ್ಯಾಯಾಂಗ ಈ ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ಇಂತಹ ಲೋಕಪಾಲ ಮಸೂದೆ ಬೇಕೆ ಎಂದು ಪ್ರಶ್ನಿಸಿದರು.

ಅಣ್ಣಾ ಹಜಾರೆ ಕೇವಲ ವ್ಯಕ್ತಿಯಲ್ಲ. ದೇಶದ ಏಳಿಗೆ ಮತ್ತು ಪಾರದರ್ಶಕ ವ್ಯವಸ್ಥೆಗಾಗಿ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯ ದಾರಿಯನ್ನು ತೋರುವ ಚಳುವಳಿಯಾಗಿದ್ದಾರೆ ಎಂದು ಹೊಗಳಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ವರುಣ್ ಗಾಂಧಿ, ಅಣ್ಣಾ ಹಜಾರೆ, ಯುಪಿಎ ಸರಕಾರ, ಜನಲೋಕಪಾಲ ಮಸೂದೆ