ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದೊಂದು ರಾಜ್ಯವೆ ಅಥವಾ ಕಾಡೆ?; ಕರುಣಾನಿಧಿ ವಾಗ್ದಾಳಿ (Karunanidhi | Jayalalithaa | TN government | Dravidian)
ತಮ್ಮ ಪಕ್ಷದ ನಾಯಕರ ವಿರುದ್ಧ ಭೂ ಕಬಳಿಕೆ ಪ್ರಕರಣಗಳನ್ನು ದಾಖಲಿಸಿರುವ ಮುಖ್ಯಮಂತ್ರಿ ಜಯಲಲಿತಾ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಡಿಎಮ್‌ಕೆ ವರಿಷ್ಠ ಕರುಣಾನಿಧಿ, ತಮಿಳುನಾಡು ಇಂದೊಂದು ರಾಜ್ಯವೆ ಅಥವಾ ಕಾಡೇ ಎಂದು ಪ್ರಶ್ನಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜೈಲಿಗೆ ಹೋಗಲು ನಾನು ಹೆದರುವವನಲ್ಲ, ಇಂತಹ ದ್ವೇಷ, ರಾಜಕೀಯ ಕುತಂತ್ರಗಳಿಂದ ದ್ರಾವಿಡ ಚಳುವಳಿಯನ್ನು 'ವೇದಾಂತ' ರಾಜಕೀಯದಿಂದ ನಿರ್ಮೂಲನೆ ಮಾಡಲು ಸಾಧ್ಯವೇ ಇಲ್ಲ ಎಂದು ಕರುಣಾನಿಧಿ ಗುಡುಗಿದ್ದಾರೆ.

ನಾನು ಎಷ್ಟು ಕಾಲ ಬುದಕುಳಿಯಲಿದ್ದೇನೆ ಎಂಬುದು ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಡಿಎಮ್‌ಕೆಯನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಮಿಳುನಾಡಿನ ಹಿರಿಯ ರಾಜಕಾರಿಣಿ ಹಾಗೂ ಮಾಜಿ ಮುಖ್ಯಮಂತ್ರಿ ಆಗಿರುವ 87ರ ಹರೆಯದ ಕರುಣಾನಿಧಿ ಖಾರವಾಗಿ ಪ್ರತಿಕ್ರಿಯಿಸಿದರು.

ಜಯಲಲಿತಾ ಸರಕಾರದ 'ವೇದಾಂತ' ರಾಜಕೀಯವನ್ನು ತೀವ್ರವಾಗಿ ಟೀಕಿಸಿರುವ ನಿಧಿ, ಎಐಎಡಿಎಮ್‌ಕೆ ಸರಕಾರದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಪಿಸಿದರು.

ನಾವೇನು ಪಾಲಯಂಕೋಟೈ ಜೈಲನ್ನು ನೋಡಿಲ್ಲವೆ? ನಾವೇನು ಪಾಲಯಂಕೋಟೈ ಜೈಲಿಗೆ ಹೋಲು ಹೆದುರುತ್ತೇವೆಯೇ? ಎಂದವರು ಕಲೈವಾನನ್ ಅವರನ್ನು ಜೈಲಿಗೆ ತಳ್ಳಿದ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.

ಪಕ್ಷದ ಶಾಸಕ ಜೆ. ಅಂಬಜಗನ್ ಮತ್ತು ಮಾಜಿ ಸಚಿವ ವೀರ್‌ಪಾಂಡಿ ಎಸ್. ಮುರುಗನ್ ಅವರನ್ನು ಬಂಧಿಸಿರುವುದಕ್ಕೆ ನೋವು ತೋಡಿಕೊಂಡ ಅವರು ಇದೇನು ರಾಜ್ಯವೇ ಅಥವಾ ಕಾಡೆ? ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಹಿಂದೊಮ್ಮೆ ತಮ್ಮ ಸರಕಾರದ ಅವಧಿಯಲ್ಲಿ ಜಲಲಲಿತಾ ಬಂಧನವನ್ನು ಪ್ರಸ್ತಾಪಿಸಿದಾಗ, ಅಂದೊಂದು ನ್ಯಾಯಾಲಯದ ಆದೇಶದಂತೆ ನಡೆದಿತ್ತು ಎಂದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕರುಣಾನಿಧಿ, ಜಯಲಲಿತಾ, ತಮಿಳುನಾಡು, ಡಿಎಮ್ಕೆ, ಸರಕಾರ