ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿರಶನಕ್ಕೂ ಮೊದಲೇ ಅಣ್ಣಾ ಬಂಧನ; ವ್ಯಾಪಕ ಪ್ರತಿಭಟನೆ (Anna Hazare | Kiran Bedi | Janlokpall bil | Central Govt)
PTI
ಭ್ರಷ್ಟಾಚಾರ ವಿರುದ್ಧ ಸಮರವನ್ನೇ ಸಾರಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜನಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಕೈಗೊಂಡಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಹತ್ತಿಕ್ಕಲು ಸರಕಾರ ಮುಂದಾಗಿದೆ.

ಆಗಸ್ಟ್ 16 ಸೋಮವಾರ ಬೆಳಗ್ಗೆ ಗಾಂಧಿವಾದಿ ಅಣ್ಣಾ ಹಜಾರೆ ಜೆಪಿ ಪಾರ್ಕ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಆದರೆ ವ್ಯವಸ್ಥಿತ ಷಡ್ಯಂತ್ರ ನಡೆಸಿರುವ ದೆಹಲಿ ಪೊಲೀಸ್ ನಿರಶನ ಆರಂಭಕ್ಕೂ ಮುನ್ನ ಅಣ್ಣಾ ಅವರನ್ನು ಬಂಧಿಸಿರುವುದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

ಪೊಲೀಸರು ಬಂಧಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಸ್ವಾತಂತ್ರ್ಯದ ಎರಡನೇ ಅಂದೋಲನ ಆರಂಭವಾಗಿದೆ. ನನ್ನ ಬಂಧನದಿಂದ ಅಂದೋಲನ ಅಂತ್ಯಗೊಳ್ಳುವುದಿಲ್ಲ. ಅಂದೋಲನದಲ್ಲಿ ಕೋಟ್ಯಾಂತರ ಜನರು ಭಾಗಿಯಾಗಿದ್ದಾರೆ. ಕೇಜ್ರಿವಾಲ್ ಕಿರಣ್ ಬೇಡಿ, ಶಾಂತಿ ಭೂಷಣ್ ಸೇರಿದಂತೆ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ನೂರಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಹಿಂಸಾ ಮಾರ್ಗದಿಂದ ಪ್ರತಿಭಟನೆ ಮುಂದುವರಿಸಿ.ಸರಕಾರಿ ಕಚೇರಿಗಳಿಗೆ ಯಾವುದೇ ನಷ್ಟ ಉಂಟು ಮಾಡುವುದು ಬೇಡ. ನಮ್ಮ ಸತ್ಯಾಗ್ರಹದಿಂದ ಯಾರಿಗೂ ತೊಂದರೆಯಾಗಬಾರದು ಎಂದು ಹಜಾರೆ ಕರೆ ನೀಡಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ನಿರ್ಮೂಲನೇ ಹಾಗೂ ವ್ಯವಸ್ಥೆಯ ಬದಲಾವಣೆಗಾಗಿ ಬದುಕಿರುವವರೆಗೆ ಹೋರಾಟ ನಡೆಸುತ್ತೇನೆ. ಸರಕಾರ ಭ್ರಷ್ಟ ವ್ಯವಸ್ಥೆಯನ್ನು ಹೇಗೆ ರಕ್ಷಿಸುತ್ತಿದೆ ಎನ್ನುವುದಕ್ಕೆ ಸರಕಾರದಲ್ಲಿರುವ ಸಚಿವರು ಕೆಲ ಹೇಳಿಕೆಗಳಿಂದ ವ್ಯಕ್ತವಾಗುತ್ತದೆ ಎಂದು ಅಣ್ಣಾ ವ್ಯಂಗ್ಯವಾಡಿದ್ದಾರೆ.

ಮಾಜಿ ಪೊಲೀಸ್ ಅಧಿಕಾರಿ ಅಣ್ಣಾ ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ, ಶಾಂತಿ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡಾ ಬಂಧಿಸಲಾಗಿದೆ.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಜಯ್ ಪ್ರಕಾಶ್ ನಾರಾಯಣ್ ಪಾರ್ಕ್‌ಗೆ ಸಾವಿರಾರು ಸಂಖ್ಯೆಯಲ್ಲಿ ಅಣ್ಣಾ ಬೆಂಬಲಿಗರು ಆಗಮಿಸುತ್ತಿದ್ದು, ಪೊಲೀಸರು ಈಗಾಗಲೇ ನೂರಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಣ್ಣಾ ಬಂಧನ,ಎನ್‌ಡಿಎ ತುರ್ತು ಸಭೆ

ಲೋಕಸಭೆಯ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಎನ್‌ಡಿಎ ಮಿತ್ರ ಪಕ್ಷಗಳೊಂದಿಗೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸಲು ತುರ್ತು ಸಭೆಯನ್ನು ಕರೆದಿದ್ದು, ಸರಕಾರ ಅಣ್ಣಾ ಹಜಾರೆಯವರನ್ನು ಬಂಧಿಸಿದ್ದರಿಂದ, ಸದನದ ಒಳಗೆ ಮತ್ತು ಹೊರಗಡೆ ಯಾವ ರೀತಿಯ ಹೋರಾಟ ನಡೆಸಬೇಕು ಎನ್ನುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಕಿರಣ್ ಬೇಡಿ, ಜನಲೋಕಪಾಲ ಮಸೂದೆ, ದೆಹಲಿ ಪೊಲೀಸ್, ಕೇಂದ್ರ ಸರಕಾರ