ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ನಿರಶನ ಕೈ ಬಿಡಿ, ಏನಾದರೂ ಮಾಡೋಣ: ಪ್ರಧಾನಿ (PM | Manmohan Singh | Appeal | Anna Hazare | Fast | Lokpal Bill)
PTI
ಭ್ರಷ್ಟಾಚಾರ ವಿರೋಧಿ ಲೋಕಪಾಲ ಮಸೂದೆಯ ಬಗ್ಗೆ ಸರಕಾರ ಹಾಗೂ ಅಣ್ಣಾ ತಂಡದ ಮಧ್ಯೆ ಬಿಕ್ಕಟ್ಟು ಮುಂದುವರಿದಿರುವಂತೆ, ಹಜಾರೆಯವರಿಗೆ ನಿರಶನ ಕೈಬಿಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.

ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ಹಜಾರೆಯವರು ತೆಗೆದುಕೊಳ್ಳುವಂತೆ ಅಣ್ಣಾ ತಂಡದ ಸದಸ್ಯರು ಮನವೊಲಿಸಬೇಕು ಎಂದು ಹೇಳಿದ್ದಾರೆ.

ಹಜಾರೆಯವರ ಎಂಟನೇ ನಿರಶನದ ದಿನದಂದು ಪ್ರಧಾನಿ ಮನಮೋಹನ್ ಸಿಂಗ್, ಜನಲೋಕಪಾಲ ಮಸೂದೆಯನ್ನು ಲೋಕಪಾಲ ಮಸೂದೆಯೊಂದಿಗೆ ಸಂಸತ್ತಿನಲ್ಲಿ ಮಂಡಿಸಲಾಗುವುದು. ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದ್ದಾರೆ.

ಲೋಕಸಭೆಯ ಸಭಾಪತಿ ಮೀರಾಕುಮಾರ್ ಅವರಿಗೆ ಮನವಿ ಮಾಡಿ ಹಜಾರೆಯವರ ಜನಲೋಕಪಾಲ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡುವಂತೆ ಸರಕಾರ ಕೋರಲಿದೆ ಎಂದು ಹಜಾರೆಯವರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಭರವಸೆ ನೀಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಜಾರೆಯವರಂತೆ ಕೇಂದ್ರ ಸರಕಾರವೂ ಕೂಡಾ ಬದ್ಧವಾಗಿದೆ. ಸಶಕ್ತ ಲೋಕಪಾಲ ಮಸೂದೆಗಾಗಿ, ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪ್ರಧಾನಿ, ಮನಮೋಹನ್ ಸಿಂಗ್, ಅಣ್ಣಾ ಹಜಾರೆ, ಲೋಕಪಾಲ ಮಸೂದೆ, ನಿರಶನ