ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಕಾರ್ಯಕ್ಕೆ ತಣ್ಣೀರು ಎರಚಿದ ರಾಹುಲ್ ಗಾಂಧಿ: ಸುಷ್ಮಾಸ್ವರಾಜ್ (BJP | Rahul Gandhi | Sushma Swaraj | Lok Sabha | Pranab Mukherjee)
PTI
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಲೋಕಪಾಲ ವ್ಯವಸ್ಥೆ ಸಂವಿಧಾನಿಕ ಸಂಸ್ಥೆಯಾಗಬೇಕು ಎಂದುಹೇಳಿಕೆ ನೀಡಿ, ಪ್ರಧಾನಿಯವರ ಕಾರ್ಯತತ್ಪರತೆಗೆ ತಣ್ಣೀರು ಎರಚಿದ್ದಾರೆ ಎಂದು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್ ಗಾಂಧಿಯವರಿಗೆ ಭಾಷಣ ಮಾಡಲು ಲೋಕಸಭೆಯಲ್ಲಿ ಕಾನೂನುಬಾಹಿರವಾಗಿ ಹೆಚ್ಚಿನ ಸಮಯ ಕೂಡಾ ನೀಡಲಾಗುತ್ತಿದೆ ಎಂದು ಸುಷ್ಮಾ ಕಿಡಿಕಾರಿದ್ದಾರೆ.

ಲೋಕಪಾಲ ಸಮಸ್ಯೆ ಕುರಿತಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಪ್ರದಾನಿಯವರು ಆರಂಭಿಸಿದ ಕಾರ್ಯಗಳಿಗೆ ರಾಹುಲ್ ಗಾಂಧಿ ಅಡ್ಡಿಯಾಗುತ್ತಿದ್ದಾರೆ ಎಂದರು.

PTI
ಲೋಕಸಭೆಯ ಶೂನ್ಯವೇಳೆಯಲ್ಲಿ ಕೇವಲ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶವಿರುತ್ತದೆ. ಪ್ರವಚನ ಮಾಡಲು ಅಲ್ಲ. ಆದರೆ, ಶೂನ್ಯ ವೇಳೆಯಲ್ಲಿ ರಾಹುಲ್ ಗಾಂಧಿಯವರಿಗೆ ದೀರ್ಘ ಭಾಷಣ ಮಾಡಲು ಸಮಯವಕಾಶ ಯಾಕೆ ಕೊಡಲಾಗುತ್ತದೆ? ಎಂದು ಪ್ರಶ್ನಿಸಿದರು.

ಸುಷ್ಮಾ ಸ್ವರಾಜ್ ವಾಗ್ದಾಳಿಗೆ ವಿರೋಧ ಪಕ್ಷಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಯಿತು. ಆದರೆ, ಸಭಾಪತಿ ಮೀರಾಕುಮಾರ್, ಯಾವುದೇ ಹೇಳಿಕೆಗಳನ್ನು ನೀಡದಂತೆ ಅಡಳಿತ ಪಕ್ಷದ ಸದಸ್ಯರನ್ನು ನಿಯಂತ್ರಿಸುವಲ್ಲಿ ಸಫಲವಾದರು.

ಅಣ್ಣಾ ಹಜಾರೆ ನಿರಶನ 12ನೇ ದಿನಕ್ಕೆ ಕಾಲಿರಿಸುತ್ತಿದ್ದಂತೆ ಲೋಕಸಭೆಯಲ್ಲಿ ಜನಲೋಕಪಾಲ ಚರ್ಚೆ ಆರಂಭಕ್ಕೆ ಚಾಲನೆ ನೀಡಿದ ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಮಾತನಾಡಿದ ನಂತರ, ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು.

ನಿನ್ನೆ ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಜನಲೋಕಪಾಲ ಜಾರಿಗೆ ತರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲ. ಚುನಾವಣಾ ಆಯೋಗದಂತೆ ಸಂಪೂರ್ಣವಾದ ಸ್ವಾಯತ್ತತೆ ಹೊಂದಿರುವ ಸಂಸ್ಥೆಯನ್ನು ರೂಪಿಸುವುದು ಸೂಕ್ತ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಲೋಕಸಭೆಯ ಶೂನ್ಯ ವೇಳೆಯಲ್ಲಿ, ವಿಷಯ ಪ್ರಸ್ತಾವನೆಗೆ ಕೇವಲ ಮೂರು ನಿಮಿಷಗಳ ಕಾಲಾವಕಾಶವಿರುತ್ತದೆ. ಆದರೆ, ರಾಹುಲ್ 15 ನಿಮಿಷಗಳವರೆಗೆ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ಸ್ವರಾಜ್, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಪರೂಪಕ್ಕೆ ಸದನದಲ್ಲಿ ಮಾತನಾಡುತ್ತಾರೆ. ಆದರೆ, ಅವರು ಮಾತನಾಡುವಾಗ ಯಾರೂ ಅವರ ಮಾತು ಕೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ರಾಹುಲ್ ಗಾಂಧಿ, ಸುಷ್ಮಾ ಸ್ವರಾಜ್, ಲೋಕಸಭಾ, ಪ್ರಣಬ್ ಮುಖರ್ಜಿ