ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನರೇಂದ್ರ ಮೋದಿ ಮತ್ತೊಬ್ಬ ಯಡಿಯೂರಪ್ಪ: ಕಾಂಗ್ರೆಸ್ (Gujarat Lokayukta | Narendra Modi | Yeddyurappa | CAG report | Shaktisinh Gohil | Latest Politics News in Kannada | India News | Late)
ನರೇಂದ್ರ ಮೋದಿ ಮತ್ತೊಬ್ಬ ಯಡಿಯೂರಪ್ಪ: ಕಾಂಗ್ರೆಸ್
ನವದೆಹಲಿ, ಶನಿವಾರ, 3 ಸೆಪ್ಟೆಂಬರ್ 2011( 13:45 IST )
PTI
ಲೋಕಾಯುಕ್ತರ ನೇಮಕ ಕುರಿತಂತೆ ರಾಷ್ಟ್ರಪತಿಗಳಿಗೆ ಭೇಟಿ ಮೀಡಿದ ಬಿಜೆಪಿ ನಿಯೋಗದ ಬಗ್ಗೆ ಕೆಂಡಕಾರಿದ ಕಾಂಗ್ರೆಸ್, ನರೇಂದ್ರ ಮೋದಿ ಮತ್ತೊಬ್ಬ ಯಡಿಯೂರಪ್ಪರವರಾಗಿದ್ದು 26,651 ಕೋಟಿ ರೂಪಾಯಿಗಳ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಸರಕಾರದ 26,651 ಕೋಟಿ ರೂಪಾಯಿಗಳ ಅವ್ಯವಹಾರ ಮತ್ತು ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದೆ. ಹಗರಣ ಎಲ್ಲಿ ಬಹಿರಂಗವಾಗುತ್ತದೆಯೋ ಎನ್ನುವ ಭಯದಿಂದ ಲೋಕಾಯುಕ್ತರ ನೇಮಕವನ್ನು ಮುಂದಿಟ್ಟುಕೊಂಡು ಬಿಜೆಪಿ ನಿಯೋಗ ರಾಷ್ಟ್ರಪತಿಗಳನ್ನು ಭೇಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಮೋಹನ್ ಪ್ರಕಾಶ್ ಕಿಡಿಕಾರಿದ್ದಾರೆ.
PTI
ಮೋದಿ ರಾಜ್ಯದಲ್ಲಿ ಭ್ರಷ್ಟಾಚಾರದ ರಾಜ್ಯಭಾರ ಮಾಡುತ್ತಿದ್ದಾರೆ. ಸ್ವತಂತ್ರವಾದ ಲೋಕಾಯುಕ್ತರ ನೇಮಕದಿಂದ, ತಮ್ಮ ಹಗರಣಗಳು ಬಹಿರಂಗವಾಗುತ್ತವೆಯೋ ಎನ್ನುವ ಆತಂಕದಿಂದಾಗಿ, ಲೋಕಾಯುಕ್ತರ ನೇಮಕಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ ಶಕ್ತಿ ಸಿನ್ಹ್ ಗೊಹಿಲ್ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿ ಪಕ್ಷಕ್ಕೆ ಪ್ರಮುಖ ಹಣ ಸಂಗ್ರಹಕಾರರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಮೋದಿ ಮತ್ತೊಬ್ಬ ಯಡಿಯೂರಪ್ಪನಂತೆ ಅಥವಾ ನೀವು ಮೋದಿಯಪ್ಪ ಎಂದು ಕೂಡಾ ಕರೆಯಬಹುದು. ಬಿಜೆಪಿ ಮಹಾನ್ ಸುಳ್ಳಿನ ಪಕ್ಷವಾಗಿದ್ದು, ಮೋದಿ ಮತ್ತು ಬಿಜೆಪಿ ಹತಾಶೆಯ ಸ್ಥಿತಿ ತಲುಪಿದೆ ಎಂದು ಗೊಹಿಲ್ ಹೇಳಿದ್ದಾರೆ.
ನೂತನ ಲೋಕಾಯುಕ್ತರಾಗಿ ಆರ್.ಎ.ಮೆಹತಾ ಅವರನ್ನು ರಾಜ್ಯಪಾಲರು ನೇಮಕ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳು ತಮಗೆ ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಲಿ. ನಾವು ಸಾರ್ವಜನಿಕವಾಗಿ ಚರ್ಚಿಸಲು ಸಿದ್ಧ ಎಂದು ಗೊಹಿಲ್ ಸರಕಾರಕ್ಕೆ ಸವಾಲೆಸೆದಿದ್ದಾರೆ.