ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಸ್ಪತ್ರೆಗೆ ಬಂದ ರಾಹುಲ್ ಗಾಂಧಿ ವಿರುದ್ಧ ಗಾಯಾಳುಗಳ ಆಕ್ರೋಶ (Delhi Blast | Rahul Gandhi | News in Kannada | Kannada Website)
ಸರಕಾರ ಏನು ಮಾಡುತ್ತಿದೆ, ಜನ ಸಾಮಾನ್ಯರಿಗೆಲ್ಲಿದೆ ರಕ್ಷಣೆ ಎಂಬ ಕೂಗಾಟದ ನಡುವೆಯೇ, ದೆಹಲಿ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದವರನ್ನು ನೋಡಲೆಂದು ಹೋದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ವಿರುದ್ಧ ಗಾಯಾಳುಗಳು ಮತ್ತವರ ಕುಟುಂಬದವರು ಆಕ್ರೋಶದಿಂದ 'ರಾಹುಲ್ ಗಾಂಧಿ ವಾಪಸ್ ಜಾವೋ' ಎಂದು ಕೂಗಾಡಿ ಘೇರಾವ್ ಹಾಕಿದ ಘಟನೆ ಬುಧವಾರ ನಡೆಯಿತು.

10 ಮಂದಿಯನ್ನು ಬಲಿತೆಗೆದುಕೊಂಡಿದ್ದ ದಿಲ್ಲಿ ಸ್ಫೋಟ ಪ್ರಕರಣದಲ್ಲಿ, ಗಾಯಗೊಂಡು ರಾಮ ಮನೋಹರ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ನೋಡಲೆಂದು ರಾಹುಲ್ ಗಾಂಧಿ ಮಧ್ಯಾಹ್ನ ಅಲ್ಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಡೀ ರಾಹುಲ್ ಗಾಂಧಿ ವಿರೋಧಿ ಘೋಷಣೆಗಳು, ಕಾಂಗ್ರೆಸ್ ವಿರೋಧೀ ಕೂಗಾಟಗಳು ಮತ್ತು ಯುಪಿಎ ವಿರೋಧಿ ಘೋಷಣೆಗಳೇ ಕೇಳಿಬರತೊಡಗಿದ್ದವು. "ರಾಹುಲ್ ಗಾಂಧಿ ವಾಪಸ್ ಜಾವೋ" "ರಾಹುಲ್ ಗಾಂಧಿ ಹೇಡಿ" ಮುಂತಾದ ಘೋಷಣೆಗಳೊಂದಿಗೆ ಯುಪಿಎ ಡೌನ್‌ಡೌನ್, ಕಾಂಗ್ರೆಸ್ ಡೌನ್‌ಡೌನ್ ಎಂಬ ಘೋಷಣೆಗಳೂ ಕೇಳಿಬಂದಿದ್ದವು.

ಇದು ಜನ ಸಾಮಾನ್ಯರ ಆಕ್ರೋಶದ ಪ್ರತಿಧ್ವನಿಯೂ ಆಗಿತ್ತು. ಈ ಹಿಂದೆ ಮುಂಬೈ ದಾಳಿ ನಡೆದ ಸಂದರ್ಭದಲ್ಲಿಯೂ ರಾಜಕಾರಣಿಗಳು ಜನರ ಆಕ್ರೋಶಕ್ಕೆ ತುತ್ತಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಮ್ಮನ್ನು ರಕ್ಷಿಸದ ನಾಯಕರು ಇದ್ದು ಪ್ರಯೋಜನವೇನು ಎಂಬುದು ಅವರ ಪ್ರಶ್ನೆ.

ಗಾಯಾಳುಗಳ ಬಂಧು ವರ್ಗದವರೆಲ್ಲರೂ ಆಸ್ಪತ್ರೆಯಲ್ಲಿ ಅಳುತ್ತಾ ಮರುಗುತ್ತಿದ್ದು, ರಾಹುಲ್ ಗಾಂಧಿ ಬಂದ ತಕ್ಷಣ ತಮ್ಮ ಆಕ್ರೋಶವನ್ನೆಲ್ಲಾ ಅವರ ಮೇಲೆ ಹರಿಯಬಿಟ್ಟು ಘೇರಾವ್ ಮಾಡಿದರು.

ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ
ಇದೇ ವೇಳೆ, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ದೆಹಲಿ ಸರಕಾರ ಘೋಷಿಸಿದ್ದು, ಶಾಶ್ವತವಾಗಿ ಅಂಗವೈಕಲ್ಯಕ್ಕೀಡಾದವರಿಗೆ ತಲಾ 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅಲ್ಲದೆ, ಸಣ್ಣಪುಟ್ಟ ಮಟ್ಟದಲ್ಲಿ ಗಾಯಗೊಂಡವರಿಗೆ 10 ಸಾವಿರ ರೂಪಾಯಿ ಘೋಷಿಸಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಾಹುಲ್ ಗಾಂಧಿ, ಕಾಂಗ್ರೆಸ್, ಘೋಷಣೆ, ದೆಹಲಿ ಸ್ಫೋಟ, ಹೈಕೋರ್ಟ್ ಸ್ಫೋಟ, ದೆಹಲಿ ಪೊಲೀಸ್, ದೆಹಲಿ ಹೈಕೋರ್ಟ್, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್