ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಲೋಕಪಾಲ ವಿರೋಧಿ ಸಂಸದರಿಗೆ ಮುಂದೆ ಓಟು ಹಾಕ್ಬೇಡಿ: ಅಣ್ಣಾ (Anna Hazare | Jan Lokpal | News in Kannada | Kannada Website)
PTI
ಜನ ಲೋಕಪಾಲ ಮಸೂದೆಯನ್ನು ಯಾರು ವಿರೋಧಿಸುತ್ತಾರೋ ಅಂಥಹಾ ಸಂಸದರಿಗೆ ಮುಂದಿನ ಚುನಾವಣೆಗಳಲ್ಲಿ ಮತ ಹಾಕಬೇಡಿ ಎಂದು ನಾಗರಿಕರಿಗೆ ಕರೆ ನೀಡಿದ್ದಾರೆ ಭ್ರಷ್ಟಾಚಾರ-ವಿರೋಧೀ ಹೋರಾಟಗಾರ ಅಣ್ಣಾ ಹಜಾರೆ.

ಸಂಸತ್ತಿನಲ್ಲಿ ಜನಲೋಕಪಾಲ ಮಸೂದೆಯನ್ನು ಅಂಗೀಕಾರವಾಗಿಸುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ತಂಡವು ಶನಿವಾರ ರಾಲೆಗಣ ಸಿದ್ಧಿಯಲ್ಲಿ ಸಭೆಸೇರಿ, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿತು.

ಜನ ಲೋಕಪಾಲ ಮಸೂದೆಯನ್ನು ಯಾರೆಲ್ಲಾ ವಿರೋಧಿಸಿದರು ಎಂದು ಟಿಪ್ಪಣಿ ಮಾಡಿಕೊಳ್ಳಿ. ಅವರ ಮನೆಗಳಿಗೆ ಮುತ್ತಿಗೆ ಹಾಕಿ ಮತ್ತು ಚುನಾವಣೆಗಳ ವೇಳೆ ಅವರು ಮತ್ತೆ ಆಯ್ಕೆಯಾಗದಂತೆ ನೋಡಿಕೊಳ್ಳಿ ಎಂದು ಅಣ್ಣಾ ಹೇಳಿದ್ದಾರೆ.

ಎರಡು ದಿನಗಳ ಈ ಸಮಾವೇಶದಲ್ಲಿ ಮುಂದಿನ ಹೋರಾಟದ ಗುರಿಯಾಗಿರುವ ಚುನಾವಣಾ ಸುಧಾರಣೆ ಹಾಗೂ ಜನಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳುವ ಪ್ರಜೆಯ ಹಕ್ಕಿನ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ರಾಲೆಗಣ ಸಿದ್ಧಿ, ಜನಲೋಕಪಾಲ, ಕನ್ನಡ ಸುದ್ದಿ, ಭಾರತ ಸುದ್ದಿ, ರಾಷ್ಟ್ರೀಯ ವಾರ್ತೆ, ಬ್ರೇಕಿಂಗ್ ನ್ಯೂಸ್, ಕನ್ನಡ ವೆಬ್ ಸೈಟ್