ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೋಕಾಕ ಜಿಲ್ಲೆ ರಚನೆ ಹೋರಾಟ ಸ್ಥಗಿತ
ಗೋಕಾಕ ಜಿಲ್ಲೆ ರಚನೆಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿರುವ ನಿಯೋಜಿತ ಗೋಕಾಕ ಜಿಲ್ಲೆ ಹೋರಾಟ ಸಮಿತಿ ಶನಿವಾರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸಚಿವ ಬಾಲಚಂದ್ರ ಜಾರಕಿ ಹೊಳಿ ಸಮಿತಿ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ ನಂತರ ಹೋರಾಟ ಹಿಂತೆಗೆದುಕೊಂಡಿದ್ದರಿಂದ ಗೋಕಾಕ್ ಸಹಜ ಪರಿಸ್ಥಿತಿಗೆ ಮರಳುತ್ತಿದೆ.

ಸಮಿತಿ ಸಭೆಯಲ್ಲಿ ಸೆಪ್ಟೆಂಬರ್ 30ರೊಳಗೆ ಗೋಕಾಕ್ ಜಿಲ್ಲೆ ರಚನೆ ಕುರಿತಂತೆ ಸರ್ಕಾರ ಘೋಷಣೆ ಮಾಡಬೇಕು, ಎಲ್ಲ ವಿಧಾನ ಸಭೆ ಕ್ಷೇತ್ರ ಹಾಗೂ ಗ್ಫ್ರಮ ಪಂಚಾಯತಿ ಮಟ್ಟದಲ್ಲಿ ಜಿಲ್ಲೆ ಕುರಿತಂತೆ ಮನವರಿಕೆ ಮಾಡಿಕೊಡಲು ಸಭೆಗಳು ನಡೆಸಬೇಕು,

ಚಿಕ್ಕೌಡಿ ಜಿಲ್ಲೆ ರಚನೆಗೆ ತಮ್ಮ ವಿರೋಧವಿಲ್ಲ, ಗೋಕಾಕ್ ಜಿಲ್ಲೆ ರಚನೆ ಯಾಗದಿದ್ದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ಹೋರಾಟ ಪುನರಾರಂಭಗೊಳ್ಳುತ್ತದೆ, ಹೊಸ ಜಿಲ್ಲೆಯ ರಚನೆ ಕುರಿತಂತೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿಗಳ ಬಳಿಗೆ 50 ಜನರ ನಿಯೋಗ ತೆರಳಬೇಕು ಎಂದು ಸಭೆ ನಿರ್ಣಯ ಕೈಗೊಂಡಿದೆ.

ಮತ್ತಷ್ಟು
ಮುಂದುವರೆದ ಅಧಿಕಾರ ಹಸ್ತಾಂತರ ಆತಂಕ
ಅಧಿಕಾರ ಹಸ್ತಾಂತರದ ಧರ್ಮ ಪಾಲನೆ-ನಾಯ್ಡು
ನೆರೆ ಹಾವಳಿ ನೆರವಿಗೆ ಕೇಂದ್ರಕ್ಕೆ ಮೊರೆ
ಜೆಡಿಎಸ್ ಜೊತೆ ಮೈತ್ರಿ ಇಲ್ಲ; ಸೋನಿಯಾ
ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನದ ಹೊಗೆ
ಕುಮಾರಸ್ವಾಮಿ ಅಸಮಾಧಾನಕ್ಕೆ ಸಮನ್ವಯ ಸಭೆ