ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕರ್ನಾಟಕದ ರಾಜ್ಯಪಾಲರಾಗಿ ಠಾಕೂರ್
ರಾಜ್ಯಪಾಲ ಟಿ ಎನ್ ಚತುರ್ವೇದಿ ಅವರ ಐದು ವರ್ಷಗಳ ಅವಧಿ ಮಂಗಳವಾರ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ, ಕರ್ನಾಟಕದ ನೂತನ ರಾಜ್ಯಪಾಲರಾಗಿ ರಾಮೇಶ್ವರ ಠಾಕೂರ್ ಅವರನ್ನು ನೇಮಕ ಮಾಡಿ ಕೇಂದ್ರ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರವು ಇನ್ನೂ ಹಲವು ರಾಜ್ಯಗಳ ರಾಜ್ಯಪಾಲರನ್ನು ಬದಲಾವಣೆ ಮಾಡಿದ್ದು, ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿರುವ ರಾಮೇಶ್ವರ ಠಾಕೂರ್ ಅವರು. ಈ ಮೊದಲು ಓರಿಸ್ಸಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.

80 ವರ್ಷದ ರಾಮೇಶ್ವರ ಠಾಕೂರ್ ಅವರು ನವಂಬರ್ 18, 2009ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಲಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಹಿನ್ನಲೆ ಹೊಂದಿರುವ ರಾಮೇಶ್ವರ ಠಾಕೂರ್ ಅವರು, 1942ರ ಚಲೆ ಜಾವೋ (ಕ್ವಿಟ್ ಇಂಡಿಯಾ) ಚಳುವಳಿಯಲ್ಲಿ ಭಾಗವಹಿಸಿದ್ದರು.
ಮತ್ತಷ್ಟು
ಹಿಮೊಫೀಲಿಯಾ ಚಿಕಿತ್ಸೆಗೆ 2 ಕೋಟಿ ರೂ.
ಕರ್ನಲ್ ವಸಂತ್ ಮನೆಗೆ ಜೆಜೆ ಸಿಂಗ್ ಭೇಟಿ
ಬಡಜನರ ಸೂರಿಗಾಗಿ 24 ಲಕ್ಷ ಮನೆ ನಿರ್ಮಾಣ
ಗೋಕಾಕ ಜಿಲ್ಲೆ ರಚನೆ ಹೋರಾಟ ಸ್ಥಗಿತ
ಮುಂದುವರೆದ ಅಧಿಕಾರ ಹಸ್ತಾಂತರ ಆತಂಕ
ಅಧಿಕಾರ ಹಸ್ತಾಂತರದ ಧರ್ಮ ಪಾಲನೆ-ನಾಯ್ಡು