ರಾಜ್ಯಪಾಲರ ನೇಮಕ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಅಭಿಪ್ರಾಯವನ್ನೂ ಕೇಳಬಹುದಿತ್ತು. ಆದರೆ ಕೇಳಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಹುಣಸಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯಪಾಲರನ್ನು ನೇಮಿಸುವಾಗ ಆ ರಾಜ್ಯದ ಮುಖ್ಯಮಂತ್ರಿಯನ್ನು ಕೇಳುವುದು ಸಂಪ್ರದಾಯವಾಗಬೇಕು. ಈ ಬಗ್ಗೆ ಹೆಚ್ಚಿಗೆ ಉತ್ತರ ನೀಡಲು ಅವರು ನಿರಾಕರಿಸಿದರು. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ರಾಜ್ಯಪಾಲರ ನೇಮಕ ಆಗಿರುವುದು ಕಾಕತಾಳೀಯ ಎಂದು ವ್ಯಾಖ್ಯಾನಿಸಿದರು ಕುಮಾರಸ್ವಾಮಿ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆಯಿಲ್ಲ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಈ ರೀತಿ ಕಾಂಗ್ರೆಸ್ ಪಕ್ಷದವರು ಕನಸು ಕಾಣುತ್ತಿದ್ದಾರೆ. ದಯವಿಟ್ಟು ಅಂತಹ ಕನಸನ್ನು ಬಿಟ್ಟುಬಿಡುವಂತೆ ಮನವಿ ಮಾಡಿದರು.
|