ಕುಮಟಾ ಬಳಿ ಸಮುದ್ರದಲ್ಲಿ ಜೀವ ರಕ್ಷಕ ದೋಣಿಯೊಂದು ಪತ್ತೆಯಾಗಿದೆ. ಸುಮಾರು 30 ಜನರು ಪ್ರಯಾಣಿಸಬಹುದಾದ ಈ ದೋಣಿಯನ್ನು ಮೀನುಗಾರರು ಪತ್ತೆ ಹಚ್ಚಿದ್ದಾರೆ.
ಇದು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಲು ಬಂದರು ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಈಗಾಗಲೇ ಕಡಲು ಕಾವಲು ಪಡೆಗೆ ಮಾಹಿತಿ ನೀಡಲಾಗಿದೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೋಟ್ ಪತ್ತೆ ಮಾಡಿದ ಮೀನುಗಾರರಿಗೆ ಬಹುಮಾನವನ್ನು ಪ್ರಕಟಿಸಲಾಗಿದೆ.
ಇತ್ತೀಚಿಗೆ ಮಂಗಳೂರು ಸಮೀಪ ಸಮುದ್ರದಲ್ಲಿ ಮುಳುಗಿದ ಡೆನ್ಡೆನ್ ಹಡಗಿನಿಂದ ಇದು ಸಮುದ್ರದಲ್ಲಿ ತೇಲಿಕೊಂಡು ಬಂದಿರಬಹುದು ಎಂದು ಶಂಕಿಸಲಾಗಿದೆ.
|