ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಮಧ್ಯಂತರ ಚುನಾವಣೆ ನಡೆಯದು. ಅಧಿಕಾರ ಹಸ್ತಾಂತರ ನಿಗದಿತ ಸಮಯದಲ್ಲಿ ನಡೆಯುತ್ತದೆ ಎಂದರು.
ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಠಾಕೂರ್, ಅವರನ್ನು ಸ್ವಾಗತಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಠಾಕೂರ್ ಆಗಮನದ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು. ಅವರ ಅನುಭವ ಹಾಗೂ ಹಿರಿತನವನ್ನು ಗೌರವಿಸುತ್ತೇವೆ ಎಂದರು.
ಆದರೆ ನಿಕಟಪೂರ್ವ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರ ಬಗ್ಗೆ ಈ ಸಂದರ್ಭದಲ್ಲಿ ಅಸಮಧಾನ ತೋಡಿಕೊಂಡವರು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ಕ್ರಮ ಅಸಮರ್ಥನೀಯ ಎಂದರು.
ಬಿಜೆಪಿ ಜತೆ ಕೈ ಜೋಡಿಸಿರುವ ಜೆಡಿಎಸ್ ಶಾಸಕರನ್ನು ಅಮಾತನತುಗೊಳಿಸುವಂತೆ ದೇವೇಗೌಡರು ಪತ್ರ ಬರೆದಿದ್ದರೂ ಅದನ್ನು ಪರಿಗಣಿಸದೇ ಇರುವುದು ಬೇಸರ ತರಿಸಿತ್ತು ಎಂದರು.
|