ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೆಂಗಳೂರಿನಲ್ಲಿ ವಿಜ್ಞಾನ ನಗರ
ನಗರದಲ್ಲಿ 100 ಎಕರೆ ಜಾಗದಲ್ಲಿ ವಿಜ್ಞಾನ ನಗರ ಆರಂಭಿಸುವುದಾಗಿ ಸಚಿವ ರಾಮಚಂದ್ರೇಗೌಡ ಪ್ರಕಟಿಸಿದ್ದಾರೆ. ಒಟ್ಟು 75 ಕೋಟಿ ರೂ ವೆಚ್ಚದಲ್ಲಿ ಈ ನಗರ ನಿರ್ಮಾಣವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50 ಸಹಾಯಧನ ನೀಡಲಿದೆ.

ಯೋಜನೆಗೆ ಶೀಘ್ರವೇ ಚಾಲನೆ ಸಿಗಲಿದೆ. ಈ ನಡುವೆ ಮಂಗಳೂರು, ಕೊಡಗು ಹಾಗೂ ಧಾರವಾಡದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಬೆಂಗಳೂರು ವಲಯದ ನಾಗವಾರ ಜಕ್ಕೂರು ಬಳಿ ನ್ಯಾನೋ ಪಾಕ್ ರ್ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿಜ್ಞಾನ ತಂತ್ರಜ್ಞಾನ ಸಚಿವ ರಾಮಚಂದ್ರೇಗೌಡ ಹೇಳಿದ್ದಾರೆ.

ಸರ್ಕಾರ ರಾಜ್ಯಾದ್ಯಂತ ಪ್ರತಿ ವರ್ಷ ವಿಜ್ಞಾನ ತಂತ್ರಜ್ಞಾನ ಸಮ್ಮೇಳನ ನಡೆಸಲು ನಿರ್ಧರಿಸಿದೆ.
ನಾಳೆ ಸಮ್ಮೇಳನ : ಸುವರ್ಣ ಕರ್ನಾಟಕ ಮಹೋತ್ಸವ ಅಂಗವಾಗಿ ಕರ್ನಾಟಕದಲ್ಲಿವಿಜ್ಞಾನ ತಂತ್ರಜ್ಞಾನದಲ್ಲಿ ಅಂದು ಇಂದು ಮುಂದು ಕುರಿತ ಸಮ್ಮೇಳನ ನಾಳೆ ನಡೆಯಲಿದೆ. ಜ್ಞಾನಜ್ಯೌತಿ ಸಭಾಂಗಣದಲ್ಲಿ ಗುರುವಾರ ಸಮ್ಮೇಳನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ಮತ್ತಷ್ಟು
ಮಧ್ಯಂತರ ಚುನಾವಣೆ ಇಲ್ಲ : ಮುಖ್ಯಮಂತ್ರಿ
ಜೀವರಕ್ಷಕ ದೋಣಿ ಪತ್ತೆ
ರಾಜ್ಯಪಾಲರ ನೇಮಕ: ಮುಖ್ಯಮಂತ್ರಿ ಅತೃಪ್ತಿ
ಸರ್ಕಾರ ರಚನೆ: ಧರಂಸಿಂಗ್ ಸ್ಪಷ್ಟನೆ
ಗುಲ್ಬರ್ಗಾ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಗ್ರಾಮವಾಸ್ತವ್ಯ
ದೇವರಾಜು ಅರಸು, ರಾಜೀವ್ ಗಾಂಧಿ ಜನ್ಮದಿನಾಚರಣೆ