ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ಮೈತ್ರಿ,ಜೆಡಿಎಸ್ ತತ್ವಗಳಿಗೆ ಧಕ್ಕೆ-ಕುಮಾರ ಸ್ವಾಮಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ನೀಡಿರುವ ಗೊಂದಲಮಯ ಹೇಳಿಕೆಯಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ಮತ್ತೊಮ್ಮ ಕಗ್ಗಂಟಾಗಿದೆ.

ಗುಲ್ಬರ್ಗಾ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆದರೆ ಜೆಡಿಎಸ್ ಪಕ್ಷದ ತತ್ವಗಳಿಗೆ ಧಕ್ಕೆ ಯಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆದರೆ ಅಲ್ಪ ಸಂಖ್ಯಾತರ ವಿಶ್ವಾಸವನ್ನು ತಮ್ಮ ಪಕ್ಷ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿರುವ ಬಿಜಿಪಿ ಸಚಿವರು ಸರ್ಕಾರದ ಸಾಧನೆಗಳೆಲ್ಲವೂ ತಮ್ಮವೇ ಎಂದು ಹೇಳುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.

ಈ ರೀತಿಯ ಸಮಸ್ಯೆಗಳನ್ನು ಎದುರಿಸುವುದಕ್ಕಿಂತ ಚುನಾವಣೆ ಎದುರಿಸುವುದೇ ಲೇಸು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಗೊಂದಲಮಯ ಹೇಳಿಕೆಗಳಿಗೆ ಪ್ರತಿಕ್ರಿಯಿಸದಿರಲು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ.

ತಾವು ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದ ಅವರು ತಮ್ಮ ಶಾಸಕರಾಗಲಿ, ತಮ್ಮ ಪಕ್ಷದ ಮುಖಂಡರಾಗಲಿ ಈ ಬಗ್ಗೆ ಪ್ರತಿಕ್ರಿಯಿಸದಿರಲು ಸೂಚನೆ ನೀಡಿದ್ದಾಗಿ ತಿಳಿಸಿದರು.

ಅಧಿಕಾರ ಹಸ್ತಾಂತರ ಖಚಿತ ಎಂದ ಅವರು ಹಿಂದಿನ ಒಪ್ಪಂದದಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತಷ್ಟು
ಬೆಂಗಳೂರಿನಲ್ಲಿ ವಿಜ್ಞಾನ ನಗರ
ಮಧ್ಯಂತರ ಚುನಾವಣೆ ಇಲ್ಲ : ಮುಖ್ಯಮಂತ್ರಿ
ಜೀವರಕ್ಷಕ ದೋಣಿ ಪತ್ತೆ
ರಾಜ್ಯಪಾಲರ ನೇಮಕ: ಮುಖ್ಯಮಂತ್ರಿ ಅತೃಪ್ತಿ
ಸರ್ಕಾರ ರಚನೆ: ಧರಂಸಿಂಗ್ ಸ್ಪಷ್ಟನೆ
ಗುಲ್ಬರ್ಗಾ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಗ್ರಾಮವಾಸ್ತವ್ಯ