ರಾಜ್ಯದ 45 ಶಾಸಕರು ಬುಧವಾರದಿಂದ 15 ದಿನ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಶಾಸಕರ ಮೊದಲ ತಂಡ ಚೀನಾದಲ್ಲಿ ಕೃಷಿ, ಶಿಕ್ಷಣ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಬುಧವಾರ ರಾತ್ರಿ 11.30 ಗಂಟೆಗೆ ಸಿಂಗಾಪುರ ಏರ್ವೇಸ್ ವಿಮಾನದಲ್ಲಿ ಚೀನಾಗೆ ತೆರಳುವ 30 ಶಾಸಕರು ಹಾಗೂ 15 ವಿಧಾನ ಪರಿಷತ್ ಸದಸ್ಯರ ಜತೆ ಏಳು ಜನ ಅಧಿಕಾರಿಗಳು ತೆರಳಲಿದ್ದಾರೆ.
ಚೀನಾಗೆ 75 ಶಾಸಕರನ್ನೊಳಗೊಂಡ ಎರಡನೆ ತಂಡ ಈ ತಿಂಗಳ 27ರಂದು ತೆರಳಲಿದೆ. ಶಾಸಕರು ಚೀನಾದ ಕೃಷಿ, ತೋಟಗಾರಿಕೆ, ಕೈಗಾರಿಕೆ ವಿವಿಗಳಿಗೆ ಭೇಟಿ ನೀಡಲಿದ್ದಾರೆ.
|