ನಗರದಲ್ಲಿ ಧನಂಜಯ ಎಂಬ ರೋಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರಿಂದ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ರೋಗಿಯ ಸಂಬಂಧೀಕರು ಬುಧವಾರ ರಸ್ತೆ ತಡೆ ನಡೆಸಿದ್ದರಿಂದ ಸ್ವಲ್ಪ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಕಿವಿ ನೋವಿನಿಂದ ಬಳಲುತ್ತಿರುವ ಧನಂಜಯನಿಗೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ ಎಂದು ಮೃತರ ಸಂಬಂಧಿಕರು ಆರೊಪಿಸಿದ್ದಾರೆ.
ಆದರೆ ಅದನ್ನು ನಿರಾಕರಿಸಿರುವ ವೈದ್ಯರು ಕಿವಿಯ ಕೀವು ಮೆದುಳಿಗೆ ಪ್ರವೇಶಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
|