ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿರುಕು ಬಿಡುವ ಹಂತದಲ್ಲಿ ಅಭಿವೃದ್ದಿ ರಂಗ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೆಡಿಎಸ್ ತತ್ವ ಮತ್ತು ಬಿಜೆಪಿ ಸಖ್ಯದ ಹೇಳಿಕೆ ಕರ್ನಾಟಕ ಅಭಿವೃದ್ದಿ ರಂಗವನ್ನು ಬಿಕ್ಕಟ್ಟಿಗೆ ಸಿಲುಕಿಸಿದ್ದು ಅಧಿಕಾರ ಹಸ್ತಾಂತರ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿಗೆ ದಕ್ಕೆ ಉಂಟು ಮಾಡಬಹುದಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಗೆ ಒಂದು ಗಂಟೆ ತಡವಾಗಿ ಹಾಜರಾಗುವ ಮೂಲಕ ಬಿಜೆಪಿ ಸಚಿವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜತೆ ಸಖ್ಯ ಮುಂದುವರೆದರೆ ಜೆಡಿಎಸ್ ತತ್ವಗಳಿಗೆ ಧಕ್ಕೆಯಾಗಲಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ತೀವ್ರ ಆಕ್ರೋಶಗೊಂಡ ಬಿಜೆಪಿ ಸಚಿವರು ಇಂದು ಬೆಳಗ್ಗೆ 9-45 ಗಂಟೆಗೆ ನಡೆಯಬೇಕಾಗಿದ್ದ ಸಚಿವ ಸಂಪುಟ ಸಭೆಗೆ ಹಾಜರಾದ ಜೆಡಿಎಸ್ ಸಚಿವರು ಬಿಜೆಪಿ ಸಚಿವರ ಆಗಮನಕ್ಕಾಗಿ ಕಾದುಕುಳಿತರು.

ಸುಮಾರು 45 ನಿಮಿಷಗಳನಂತರ ವಿಧಾನಸಭೆಗೆ ಬಿಜೆಪಿ ಸಚಿವರು ಹಾಜರಾದರೂ ಮುಖ್ಯಮಂತ್ರಿಗಳ ಕಚೇರಿಯಲ್ಲೇ ಕುಳಿತರು. ನಂತರ ಸಚಿವ ಆರ್ ಅಶೋಕ್ ಸಂಧಾನಕ್ಕೆ ಮುಂದಾಗಿ ಮೂರುಬಾರಿ ಸಮಾಲೋಚನೆ ನಡೆಸಿದ ನಂತರವಷ್ಟೇ ಬಿಜೆಪಿ ಸಚಿವರು ಸಚಿವ ಸಂಪುಟ ಸಭೆಗೆ ಹಾಜರಾದರು.

ನಂತರ ಇದಕ್ಕೆ ಜೆಡಿಎಸ್ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಪಕ್ಷಗಳ ಸಚಿವರ ನಡುವೆ ವಾಗ್ಯುದ್ದ ನಡೆಯಿತು ಎಂದು ಹೇಳಲಾಗಿದೆ.
ಮತ್ತಷ್ಟು
ಯಡಿಯೂರಪ್ಪ ಮೌನಕ್ಕೆ ಶರಣು
ನೂತನ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ
ರೋಗಿ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ
ಗಣಿ ರಾಜಕೀಯ:ಸಚಿವ ರಾಮುಲು ಟೀಕೆ
ಚೀನಾ ದೇಶಕ್ಕೆ ಶಾಸಕರ ತಂಡ
ಬಿಜೆಪಿ ಮೈತ್ರಿ,ಜೆಡಿಎಸ್ ತತ್ವಗಳಿಗೆ ಧಕ್ಕೆ-ಕುಮಾರ ಸ್ವಾಮಿ