ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ಸಚಿವರು ಸುಸ್ತು: ಕುಮಾರ
NRBNRB
ಸಚಿವ ಸಂಪುಟದ ನಂತರ ಹೊರಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಸಚಿವರು ಪಕ್ಷದ ವಿಚಾರವನ್ನು ಚರ್ಚಿಸಿ ಸುಸ್ತಾಗಿದ್ದರು ಆದ್ದರಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ವ್ಯಂಗವಾಡಿದ್ದಾರೆ.

ಬಿಜೆಪಿಯೊಂದಿಗೆ ಸಖ್ಯ ಮುಂದುವರಿಸಿದಲ್ಲಿ ಜೆಡಿಎಸ್ ತತ್ವಗಳಿಗೆ ದಕ್ಕೆಯಾಗಲಿದೆ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಇದು ವಾಸ್ತವ ಎಂದು ಹೇಳಿದರು.
ಮುಖ್ಯಮಂತ್ರಿ ಹೇಳಿಕೆಯನ್ನು ವಿರೋಧಿಸಿದ್ದ ಬಿಜಿಪಿಯ ಸಚಿವರು ಆರೋಗ್ಯ ಸಚಿವ ಆರ್ ಅಶೋಕ್ ಅವರ ಸಂಧಾನದ ನಂತರ ಸಚಿವ ಸಂಪುಟಕ್ಕೆ ಹಾಜರಾಗಲು ಒಪ್ಪಿಕೊಂಡರು.

ಸಚಿವ ಸಂಪುಟದ ಸಭೆಯಲ್ಲಿ ಮೊದಲೇ ಹಾಜರಿದ್ದ ಜೆಡಿಎಸ್ ಸಚಿವರು ಮತ್ತು ಬಿಜೆಪಿ ಸಚಿವರ ನಡುವೆ ವಿಳಂಬವಾದದ್ದಕ್ಕೆ ಮಾತಿನ ಚಕಮಕಿ ನಡೆಯಿತು ಎಂದೂ ಕೊನೆಗೆ ಅಧಿಕಾರ ಹಸ್ತಾಂತರಕ್ಕೆ ಕುರಿತಂತೆ ಯಾರೂ ಮಾತನಾಡದು ಕೂಡದು ಎಂದು ಗೃಹ ಸಚಿವ ಎಂ ಪಿ ಪ್ರಕಾಶ್ ತಾಕೀತು ಮಾಡಿದರು ಎಂದು ವರದಿಯಾಗಿದೆ.
ಮತ್ತಷ್ಟು
ಬಿರುಕು ಬಿಡುವ ಹಂತದಲ್ಲಿ ಅಭಿವೃದ್ದಿ ರಂಗ
ಯಡಿಯೂರಪ್ಪ ಮೌನಕ್ಕೆ ಶರಣು
ನೂತನ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ
ರೋಗಿ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ
ಗಣಿ ರಾಜಕೀಯ:ಸಚಿವ ರಾಮುಲು ಟೀಕೆ
ಚೀನಾ ದೇಶಕ್ಕೆ ಶಾಸಕರ ತಂಡ