ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ಕುರಿತು ಪಾಲುದಾರ ಪಕ್ಷಗಳಲ್ಲಿ ದಿನಕ್ಕೊಂದು ವಿವಾದ ಹುಟ್ಟುತ್ತಿರುವ ಹಿನ್ನಲೆಯಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಅಧಿಕೃಕ ನಿವಾಸ ಕೃಷ್ಣದಲ್ಲಿ ಸಮನ್ವಯ ಸಭೆ ನಡೆಲಿದೆ.
ಪದೇ ಪದೇ ಜೆಡಿಎಸ್‌ನಿಂದ ಅಪಮಾನಕ್ಕೆ ಈಡಾಗುತ್ತಿರುವ ಬಿಜಿಪಿ ಮುಖಂಡರು ಏನೇ ಆಗಲಿ ಆ ಪಕ್ಷಕ್ಕೆ ಶರಣಾಗಬಾರದು ಎಂಬ ನಿಲವು ತಾಳಿದ ಹಿನ್ನೆಲೆಯಲ್ಲಿ ಸಮನ್ವಯ ಸಭೆಯಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಸಭೆ ನಡೆಯುವ ಮುನ್ನ ತಮ್ಮ ಪಾಲುದಾರ ಪಕ್ಷವನ್ನು ಎದುರಿಸಲು ವ್ಯೂಹ ರೂಪಿಸಲು ಬಿಜೆಪಿ ಸಭೆ ನಡೆಸಲಿದೆ.
ಈ ನಡುವೆ ಸಭೆ ನಡೆಯುವ ಸಾಧ್ಯತೆ ಇಲ್ಲ ಎಂದು ಉಭಯ ಪಕ್ಷಗಳು ಭಾವಿಸುತ್ತಿವೆ. ಸಮನ್ವಯ ಸಭೆಯಲ್ಲಿ ಅಧಿಕಾರ ಹಸ್ತಾಂತರ ಕುರಿತು ಮಾತ್ರ ಚರ್ಚೆ ನಡೆಯುವುದಿಲ್ಲ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆ ಚರ್ಚೆ ನಡೆಸಲಿದೆ ಎಂದು ಹೇಳಿದ್ದಾರೆ.
ಉಭಯ ಪಕ್ಷಗಳ ಮುಖಂಡರು ಬೇಸರದಿಂದ ನುಡಿದ ಮಾತುಗಳಿಗೆ ಮಾಧ್ಯಮಗಳು ಹೆಚ್ಚು ಮಹತ್ವ ನೀಡುತ್ತಿವೆ ಎಂದು ಟೀಕಿಸಿದ್ದಾರೆ.
|