ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ
ಈ ಬಾರಿಯ ಗೌರಿ ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ ಎಂದು ನಗರದ ಪರಿಸರ ಜಾಗೃತಿ ಸಂಘ -ಸಂಸ್ಥೆಗಳು ಅಭಿಯಾನ ಆರಂಭಿಸಿವೆ. ನಗರದೆಲ್ಲೆಡೆ ಬೀದಿ ಬದಿಯ ಮೂರ್ತಿಗಳ ಮಾರಾಟ ಭರದಿಂದ ನಡೆಯುತ್ತಿದ್ದು, ಮಾರಾಟಗಾರರು ಪರಿಸರಕ್ಕೆ ತೊಂದರೆಯಾಗುವ ಬಣ್ಣಗಳನ್ನು ಬಳಸಬಾರದು ಎಂದು ಮನವಿ ಮಾಡಿವೆ.

ವಿಗ್ರಹಕ್ಕೆ ಬಳಿಯುವ ಕೆಲವು ಬಣ್ಣಗಳು ಪರಿಸರಕ್ಕೆ ತುಂಬಾ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಬಣ್ಣ ರಹಿತ ಗಣೇಶನ ಮಾರಾಟಕ್ಕೆ ಕೆಲ ಸಂಸ್ಥೆಗಳು ಪ್ರಚಾರ ಆರಂಭಿಸಿವೆ. ಈ ಸಂಬಂಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿರುವ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿವೆ.

ಬೆಂಗಳೂರಿನಲ್ಲಿ ಲಕ್ಷ ಸಂಖ್ಯೆಯಲ್ಲಿ ಗಣೇಶ ವಿಗ್ರಹ ಮಾರಾಟ ನಡೆಯುತ್ತಿದ್ದು ಈಗಾಗಲೇ ಕಲಾವಿದರು ತಯಾರಿಯಲ್ಲಿ ನಿರತರಾಗಿದ್ದಾರೆ. ಅಪಾಯಕಾರೀ ಸೀಸದ ಬಳಕೆಯನ್ನು ವಿಗ್ರಹ ತಯಾರಕರು ಮಾಡಬಾರದು ಎಂದು ವಿವಿಧ ಸಂಸಘ ಸಂಸ್ಥೆಗಳು ಕೇಳಿಕೊಂಡಿವೆ.
ಮತ್ತಷ್ಟು
ಶಾಸ್ತ್ತ್ರೀಯ ಭಾಷೆ ಇಚ್ಛಾ ಶಕ್ತಿಯ ಕೊರತೆ
ಕುಮಾರಸ್ವಾಮಿಗೆ ಜ್ಞಾನೋದಯ: ಧರಂ
ನೆನೆಗುದಿಗೆ ಬಿದ್ದಿರುವ ಅಭಿವೃದ್ದಿ ರಂಗದ ಸಮನ್ವಯ ಸಭೆ
ಬೆಂಗಳೂರು: ಆರು ಕೋಟಿ ಹೆರಾಯಿನ್ ವಶ
ಬಿಜೆಪಿ ಸಚಿವರು ಸುಸ್ತು: ಕುಮಾರ
ಬಿರುಕು ಬಿಡುವ ಹಂತದಲ್ಲಿ ಅಭಿವೃದ್ದಿ ರಂಗ