ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅವಸಾನದತ್ತ ರಂಗ ಅಭಿವೃದ್ದಿ
ದೇವೆಗೌಡರ ಕಟ್ಟಾಜ್ಞೆಯನ್ನು ದೂರ ತಳ್ಳಿ ಹದಿನೆಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಅಭಿವೃದ್ದಿ ರಂಗ ಎಂಬ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರಾವಧಿ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂದು ಬಲ್ಲ ಮೂಲಗಳಿಂದ ವ್ಯಕ್ತವಾಗಿದೆ.

ಅಧಿಕಾರ ಲೋಲುಪ್ತರ ಪಗಡೆಯಾಟದಲ್ಲಿ ತೆರೆಯ ಹಿಂದೆ ನಿಂತು ದಾಳ ಎಸೆಯುತ್ತಿರುವ ದೇವೇಗೌಡರು ಅಧಿಕಾರ ಹಂಚಿಕೆ ಪ್ರಕ್ರಿಯೆ ಉಭಯ ಪಕ್ಷಗಳಿಗೆ ಸೇರಿದ್ದು. ಇಬ್ಬರೂ ಅನುಭವಿ ರಾಜಕಾರಣಿಗಳು ಆಗಿರುವುದರಿಂದ ಹೆಚ್ಚಿಗೆ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಖಾಸಗಿ ಟಿ ವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆದರೆ ಈ ಖಾಸಗಿ ಚಾನೆಲ್ಗೆ ಸಿಕ್ಕ ಖಚಿತ ಮಾಹಿತಿ ಪ್ರಕಾರ ಜೆಡಿ(ಎಸ್)-ಬಿಜೆಪಿ ಮೈತ್ರಿ ಹೀಗೇ ಮುಂದುವರೆದಲ್ಲಿ ಅದು ಮುಂಬರುವ ಚುನಾವಣೆಗಳಲ್ಲಿ ಜೆಡಿ(ಎಸ್) ಪಾಲಿಗೆ ಆತ್ಮಾಹುತಿ ಪ್ರಕ್ರಿಯೆಯೆಂದೇ ಭಾವಿಸಿರುವ ದೇವೇಗೌಡರು ಆದಷ್ಟು ಬೇಗ ಸಂಬಂಧ ಕಳಚಿಕೊಳ್ಳುವುದೇ ಲೇಸು ಎಂದಿದ್ದಾರೆಂದು ತಿಳಿದುಬಂದಿದೆ.

ಈ ದಿಸೆಯಲ್ಲಿ ಅವರು ಕೆಲವೊಂದು ಸಂಭವನೀಯ ಯೋಜನೆಗಳನ್ನು ರೂಪಿಸಿದ್ದಾರೆ ಮೊದಲನೆಯದಾಗಿ ಈಗಿರುವ ವಿಧಾನಸಭೆಯನ್ನು ವಿಸರ್ಜಿಸುವುದು ಎರಡನೆಯದಾಗಿ ಕಾಂಗ್ರೆಸ್ನೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವುದು ಮೂರನೆಯದಾಗಿ ಬಿಜೆಪಿಯನ್ನು ಇಬ್ಬಾಗಿಸಿ ಈಗಿರುವ ನಾಯಕತ್ವವೇ ಮುಂದುವರೆಯುವಂತೆ ಮಾಡುವುದು ಕೊನೆಯದಾಗಿ ಶತಾಯ ಗತಾಯ ಯಡಿಯೂರಪ್ಪನವರನ್ನು ಅಧಿಕಾರದಿಂದ ದೂರವಿಡುವುದು.

ಈ ಮಾತಿಗೆ ಇಂಬುಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಲಿರಾಜಕೀಯದಲ್ಲಿ ಯಾರೂ ಶತೃಗಳಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ. ಆದರೆ ಯಡಿಯೂರಪ್ಪನವರು ಮಾತ್ರ ಈ ವಿಚಾರದಲ್ಲಿ ನನ್ನ ಶಾಸಕರಿಗೆ ಅಕ್ಟೋಬರ್ 3ರವರೆಗೆ ಏನನ್ನು ಮಾತನಾಡದೆ ಸುಮ್ಮನಿರಿ ಎಂದು ತಾಕೀತು ಮಾಡಿದ್ದಾರೆ.

ಆದರೆ ಅಧಿಕಾರ ಕಳೆದುಕೊಂಡು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿರುವ ಕಾಂಗ್ರೆಸ್ ಪಕ್ಷದ ಕೆಲವು ನಾಯಕರುಗಳು ದೇವೇಗೌಡರೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವತ್ತ ತೀವ್ರ ಒಲವು ತೋರುತ್ತಿದ್ದು, ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಾತೇ ಅಂತಿಮ ಅಧಿಕಾರ ಹೊಂದಾಣಿಕೆಯ ಪೂರ್ಣ ಚಿತ್ರಣ ಸೆಪ್ಟಂಬರ್ ಕೊನೆಯ ವೇಳೆಗೆ ಸಿಗುವ ಸಾಧ್ಯತೆಯಿದ್ದು ಆಗು ಹೋಗುಗಳು ದೇವೇಗೌಡರ ಕೈಯಲ್ಲಿವೆ.
ಮತ್ತಷ್ಟು
ಲೈಸೆನ್ಸ್ ಜಾರಿ ಹೊಟೆಲು ಸಂಘದ ಜವಾಬ್ದಾರಿ
ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ
ಶಾಸ್ತ್ತ್ರೀಯ ಭಾಷೆ ಇಚ್ಛಾ ಶಕ್ತಿಯ ಕೊರತೆ
ಕುಮಾರಸ್ವಾಮಿಗೆ ಜ್ಞಾನೋದಯ: ಧರಂ
ನೆನೆಗುದಿಗೆ ಬಿದ್ದಿರುವ ಅಭಿವೃದ್ದಿ ರಂಗದ ಸಮನ್ವಯ ಸಭೆ
ಬೆಂಗಳೂರು: ಆರು ಕೋಟಿ ಹೆರಾಯಿನ್ ವಶ