ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರ ಹಸ್ತಾಂತರ: ಗೊಂದಲಗಳಿಗೆ ತೆರೆ
ರಾಜ್ಯದ ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ಕುರಿತ ಹೇಳಿಕೆಗಳ ಭರಾಟೆ ಮುಂದುವರೆದಿದೆ. ಮುಂದಿನ ರಾಜ್ಯ ವಿಧಾನಮಂಡಲ ಅಧಿವೇಶನ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈವರೆಗಿದ್ದ ಅಧಿಕಾರ ಹಸ್ತಾಂತರ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ಗೊಂದಲಕ್ಕೆ ಕಾರಣ ಮಾಧ್ಯಮದವರು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದರೆ ಸಚಿವ ಆರ್. ಅಶೋಕ್ ಸಹಾ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಧಿಕಾರ ಹಸ್ತಾಂತರ ಕುರಿತ ವಿಶ್ಲೇಷಣೆಗಳು ಪ್ರತಿದಿನ ಒಂದಲ್ಲಾ ಒಂದು ಮಾಧ್ಯಮದಲ್ಲಿ ಬರುತ್ತಲೇ ಇವೆ. ಈ ವಿಶ್ಲೇಷಣೆಗಳೆಲ್ಲವೂ ತಲೆಕೆಳಗಾಗಲಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಊಹಾಪೋಹದ ಸುದ್ದಿಗಳನ್ನು ಕೇಳಿ ಕೇಳಿ ತಮಗೆ ತಲೆ ಚಿಟ್ಟುಹಿಡಿದಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಆ ಮೂಲಕ ಬಿಜೆಪಿಗೆ ಅಧಿಕಾರ ಹಸ್ತಾಂತರ ಕುರಿತು ಸೂಚ್ಯವಾಗಿ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾತೊರೆಯುತ್ತಿಲ್ಲ ಎಂದು ಕೇಂದ್ರ ಯೋಜನ ಸಚಿವ ಎಂ.ವಿ. ರಾಜಶೇಖರನ್ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ನಡೆಸುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಬಿಟ್ಟ ವಿಚಾರ. ಆದರೆ, ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುವ ಕುರಿತು ಕಾಂಗ್ರೆಸ್ ಪಕ್ಷದ ವರಿಷ್ಠರೇ ಹೊರತು ಯಾರೂ ಅಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಅವಸಾನದತ್ತ ರಂಗ ಅಭಿವೃದ್ದಿ
ಲೈಸೆನ್ಸ್ ಜಾರಿ ಹೊಟೆಲು ಸಂಘದ ಜವಾಬ್ದಾರಿ
ಗಣೇಶನಿಗೆ ನೈಸರ್ಗಿಕ ಬಣ್ಣವೇ ಇರಲಿ
ಶಾಸ್ತ್ತ್ರೀಯ ಭಾಷೆ ಇಚ್ಛಾ ಶಕ್ತಿಯ ಕೊರತೆ
ಕುಮಾರಸ್ವಾಮಿಗೆ ಜ್ಞಾನೋದಯ: ಧರಂ
ನೆನೆಗುದಿಗೆ ಬಿದ್ದಿರುವ ಅಭಿವೃದ್ದಿ ರಂಗದ ಸಮನ್ವಯ ಸಭೆ