ಎರಡನೇ ಪ್ರಪಂಚ ಯುದ್ಧ ಸಮಯದಿಂದಲೂ ಬಳಕೆಯಾಗದೆ ಉಳಿದಿರುವ ನಾಲ್ಕು ಏರ್ ಸ್ಟ್ರಿಪ್‌ಗಳು ಮತ್ತೆ ಕಾರ್ಯಾರಂಭ ಮಾಡುವಂತಾಗಲು ಕೇಂದ್ರ ಸರ್ಕಾರ ಖಾಸಗಿ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಬಂಡವಾಳ ಹೂಡುವಂತೆ ಮನವೊಲಿಸುತ್ತಿದೆ.
ಕರ್ನಾಟಕದ ಶಿವಮೊಗ್ಗ, ಗುಲ್ಬರ್ಗ, ಹಾಸನ ಮತ್ತು ಕಾರವಾರಗಳಲ್ಲಿ ಏರ್ ಸ್ಟ್ರಿಪ್‌ಗಳು ಇವೆ. ಕರ್ನಾಟಕ ಸರ್ಕಾರ ತನ್ನ ರಾಜ್ಯದಲ್ಲಿನ ಏರ್‌ಸ್ಟ್ರಿಪ್ ಅಭಿವೃದ್ದಿಪಡಿಸಲು ಮುಂದೆ ಬಂದಿದೆ.
ಈ ಏರ್ ಸ್ಟ್ರಿಪ್‌ಗಳನ್ನು ಬಳಸಿಕೊಳ್ಳುವುದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ ಬರಲಿದೆ ಎಂಬುದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯ ಲೆಕ್ಕಾಚಾರವಾಗಿದೆ.
ಈ ಸಂಬಂಧ ಈಗಾಗಲೇ ಖಾಸಗಿ ಹೂಡಿಕೆದಾರರ ಜತೆ ಸರ್ಕಾರ ಮಾತುಕತೆ ನಡೆಸಿದೆ. ಈ ಏರ್ ಸ್ಟ್ರಿಪ್‌ಗಳ ನಿರ್ವಹಣೆ ಬಗ್ಗೆ ಮಾರ್ಗದರ್ಶಿ ಸೂತ್ರಗಳು, ನೀತಿ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ.
|