ಶಾಸಕ ಅಂದಾನಿ ಅಧ್ಯಕ್ಷರಾಗಿರುವ ಜಂಟಿ ಸದನದ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಸೋಮವಾರ ಸರ್ಕಾರಕ್ಕೆ ವರದಿ ನೀಡಿದೆ. ಶಿಕ್ಷಣ ಸೆಸ್ ವಿಧಿಸಿದಂತೆ ಆಸ್ತಿ ಸೆಸ್ ವಿಧಿಸಿ ಆ ಮೂಲಕ ಬರುವ ಹಣವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಸತಿನಿಲಯಗಳಿಗೆ ವೆಚ್ಚ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಅಧ್ಯಕ್ಷ ಅಂದಾನಿ ಅನುಪಸ್ಥಿತಿಯಲ್ಲಿ ಸಮಿತಿಯ ಸದಸ್ಯ ತನ್ವೀರ್ ಸೇಠ್ ವರದಿ ಸಲ್ಲಿಸಿದರು. ತಾಲೂಕಿಗೊಂದು ಮೊರಾರ್ಜಿ ಶಾಲೆಯನ್ನು ತೆರೆಯಬೇಕು ಹಾಗೂ ಹಿಂದುಳಿದ ವರ್ಗಗಳಿಗೆ ನಿವೇಶನಗಳನ್ನು ಹಂಚಬೇಕು ಎಂಬುದು ಮತ್ತೊಂದು ಶಿಫಾರಸು.
|