ರಾಜ್ಯದಲ್ಲಿ 63 ಸಾವಿರ ಕೋಟಿ ಬಂಡವಾಳ ಹೂಡಿಕೆಯನ್ನು ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ. ಈ ಯೋಜನೆಯಿಂದಾಗಿ ರಾಜ್ಯದ 91 ಲಕ್ಷಕ್ಕೂ ಅಧಿಕ ಮಂದಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಲಭ್ಯವಾಗಲಿದೆ.
ಸರಕಾರ ಒಪ್ಪಿಗೆ ನೀಡಿರುವ ಯೋಜನೆಗಳಲ್ಲಿ ಮಾಹಿತಿ ತಂತ್ರಜ್ಞಾನದ 16, ಸಕ್ಕರೆ 7 ಉಕ್ಕು 5 ಉಳಿದಂತೆ ಪ್ರವಾಸೋದ್ಯಮ, ರಾಸಾಯನಿಕ, ಎಲೆಕ್ಟ್ರಾನಿಕ್ಸ್, ವಿಮಾನ ಯಾನ ಮತ್ತು ಜವಳಿ ಸೇರಿದೆ. ಸರಕಾರದ ಪ್ರಸ್ತಾವಿತ ಯೋಜನೆಯಲ್ಲಿ 6 ಸಾವಿರ ಕೋಟಿ ವೆಚ್ಚದ ಎರಡು ಶಾಖೋತ್ಪನ್ನ ಘಟಕಗಳೂ ಸೇರಿವೆ.
ಈ ನಡುವೆ ಸರಕಾರ 13 ವಿಶೇಷ ವಿತ್ತ ಯೋಜನೆಗಳಿಗೆ ಅನುಮತಿ ನೀಡಿದ್ದು ಒಪ್ಪಿಗೆ ದೋರೆತಿರುವ ಯೋಜನೆಗಳನ್ನು 3 ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಸಭೆ ನಿರ್ಧರಿಸಿದೆ. ಈ ನಡುವೆ ಹುಮನಾಬಾದ್‌ನಲ್ಲಿ ರಿಲಾಯನ್ಸ್ ತನ್ನ ವಿದ್ಯುತ್ ಘಟಕವನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರಕಾರ ಈ ಯೋಜನೆಗೂ ಹಸಿರು ನಿಶಾನೆ ತೋರಿಸಿದೆ. ಹಾಸನದಲ್ಲಿ ವಿಮಾನ ಯಾನ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸುವುದಾಗಿ ಹೇಳಿದೆ.
|