ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಳೆ ಪರಿಹಾರದಲ್ಲಿ ವಿಳಂಬ: ಡಿಸಿಎಂ ಟೀಕೆ
ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾಗು ಆಸ್ತಿಪಾಸ್ತಿ ನಷ್ಟಕ್ಕೆ ತಕ್ಷಣ 500 ಕೊಟಿ ರೂ. ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರ ಪರಿಹಾರ ಒದಗಿಸಲು ಮುಂದಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ತಾವು ಪರಿಹಾರಕ್ಕಾಗಿ ವಿನಂತಿಸಿಕೊಂಡರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕನಿಷ್ಠಪಕ್ಷ ರಾಜ್ಯದಲಿ ಅತಿವೃಷ್ಟಿಯಿಂದಾಗಿ ಆಗಿರುವ ನಷ್ಟವನ್ನು ಅಂದಾಜಿಸಲು ಕೇಂದ್ರ ಸರ್ಕಾರ ಪರೀಶೀಲನಾ ತಂಡವನ್ನು ಕಳುಹಿಸಿಲ್ಲ ಎಂದು ಅವರು ಹೇಳಿದ್ದಾರೆ.

ಮಳೆ ಪರಿಹಾರ ಮಂಜೂರಿಗೆ ಸಂಬಂಧಿಸಿ ಪ್ರಧಾನಿಗಳ ಬಳಿಗೆ ಸರ್ವ ಪಕ್ಷ ನಿಯೋಗಕ್ಕೆ ಭೇಟಿ ನೀಡಲು ಪ್ರಧಾನಿಗಳು ಇನ್ನೂ ದಿನಾಂಕವನ್ನು ನಿಗದಿಪಡಿಸದಿರುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣಿ ತಾಳಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿಯಾಗಲು ಸಮರ್ಥರಲ್ಲ ಎಂದು ಡಿಟಿ ಜಯಕುಮಾರ್ ಟೀಕಿಸಿರುವ ಬಗ್ಗೆ ತಾವು ಮೌನಕ್ಕೆ ಶರಣಾಗಿ ಪ್ರತಿಕ್ರಿಯಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ಚುನಾವಣೆ: ಬಿಜೆಪಿ ಸಭೆ
ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಭೆ
63 ಸಾ, ಕೋ.ರೂ ಬಂಡವಾಳ ಹೂಡಿಕೆ: ಸಿ ಎಂ
ಮಂಗಳೂರು:ಶೀಘ್ರ ಶಿರಾಡಿ ರಸ್ತೆ ಅಭಿವೃದ್ದಿ
ಅನಧಿಕೃತ ಜಾಹೀರಾತು ಪಲಕ ಜಂಟಿ ಆಯುಕ್ತರು ಜವಾಬ್ದಾರರು
ಹಿಂ. ವರ್ಗಗಳ ಕಲ್ಯಾಣ ಸಮಿತಿ ವರದಿ