ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಮುಂದುವರೆದಿದ್ದು, ಹೊಸಪೇಟೆ ತಾಲೂಕಿನ ಪೋತಲಕಟ್ಟೆ ಗ್ರಾಮದಲ್ಲಿ ಸೆಪ್ಟೆಂಬರ್ 4 ರಂದು ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ.
ಇದೇ ಗ್ರಾಮದಲ್ಲಿ ಹಿಂದೊಮ್ಮೆ ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯ ಹೂಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆ ಕಾರ್ಯಕ್ರಮಕ್ಕೆ ಎರಡು ದಿನ ಮೊದಲು ಕುಮಾರಸ್ವಾಮಿ ಯವರ ರಾಜಕೀಯ ಬದ್ಧ ವೈರಿ ಸಿದ್ದರಾಮಯ್ಯ ಅವರ ಬೃಹತ್ ಕಟೌಟ್ಗಳನ್ನು ಎಲ್ಲೆಡೆ ನಿಲ್ಲಿಸಲಾಗಿತ್ತು. ಇದರಿಂದ ಕುಮಾರಸ್ವಾಮಿ ಅವರು ಕಸಿವಿಸಿಗೊಂಡರು. ಹಾಗಾಗಿ ಆ ಗ್ರಾಮ ವಾಸ್ತವ್ಯವನ್ನು ರದ್ದುಪಡಿಸಲಾಗಿತ್ತು.
ಗ್ರಾಮ ವಾಸ್ತವ್ಯ ಹೂಡುವ ಗ್ರಾಮಗಳಲ್ಲಿ ಸಾಗುವಂತೆ ರಸ್ತೆ ನಿರ್ಮಾಣ, ಕುಡಿಯುವ ನೀರು ಸರಬರಾಜು, ರಸ್ತೆಗಳ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ.
|