ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು
ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿ 2006-07 ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ ಚಲನಚಿತ್ರಗಳ ಪಟ್ಟಿಗೆ ತಡೆಯಾಜ್ಞೆ ನೀಡುವಂತೆ ಖ್ಯಾತ ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಲ್ಲಿಸಿದ್ದ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಇದರಿಂದಾಗಿ ಆ.30ರಂದು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿತ್ತು. ಪ್ರಶಸ್ತಿಗಾಗಿ ಒಟ್ಟು 37 ಚಲನಚಿತ್ರಗಳ ನಿರ್ಮಾಪಕರು ಅರ್ಜಿ ಸಲ್ಲಿಸಿದರು. ಆಪೈಕಿ ಬರಗೂರು ರಾಮಚಂದ್ರಪ್ಪ ಅವರ ಚಿತ್ರ ಜಾನಪದವೂ ಸೇರಿತ್ತು.

ಪ್ರಶಸ್ತಿ ಆಯ್ಕೆಯಲ್ಲಿ ಜಾನಪದ ಚಿತ್ರವನ್ನು ಕಡೆಗಣಿಸಲಾಗಿದೆ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡುವಾಗ ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಸಮಿತಿಯ ಈ ಕ್ರಮ ಸರ್ಕಾರ ಪ್ರಶಸ್ತಿಗಳ ಆಯ್ಕೆಗೆ ರೂಪಿಸಿದ ಮಾನದಂಡ ಮತ್ತು ಸರ್ಕಾರದ ಆಶಯಕ್ಕೆ ವ್ಯತಿರಿಕ್ತವಾಗಿದೆ ಎಂಬುದು ಬರಗೂರರ ಆರೋಪ.

ಬರಗೂರು ರಾಮಚಂದ್ರಪ್ಪ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ವಾರ್ತಾ ಇಲಾಖೆ ಹಾಗೂ 2006-07 ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಮತ್ತಷ್ಟು
ಬೃಹತ್ ಉದ್ದಿಮೆಗಳಿಂದ ಹೆಚ್ಚಲಿರುವ ಸಮಸ್ಯೆಗಳು
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ
ಮಳೆ ಪರಿಹಾರದಲ್ಲಿ ವಿಳಂಬ: ಡಿಸಿಎಂ ಟೀಕೆ
ಚುನಾವಣೆ: ಬಿಜೆಪಿ ಸಭೆ
ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಭೆ
63 ಸಾ, ಕೋ.ರೂ ಬಂಡವಾಳ ಹೂಡಿಕೆ: ಸಿ ಎಂ