ಮರಳು ಸ್ಬೆರಿದಂತೆ ಕಟ್ಟಡ ನಿರ್ಮಾಣ ಸಾಮಾಗ್ರಿ ಮಾಡುವ ಲಾರಿ ಮಾಲೀಕರು ಸೆಪ್ಟೆಂಬರ್ 1 ರಿಂದ ಮತ್ತೊಮ್ಮೆ ಲಾರಿ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಸರ್ಕಾರ ನೀಡಿದ್ದ ಭರವಸೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲಾರಿ ಮಾಲಿಕರು ಮತ್ತು ಏಜೆಂಟರ ಒಕ್ಕೂಟ ಈ ನಿರ್ಧಾರವನ್ನು ಗುರವಾರ ಪ್ರಕಟಿಸಲಿದೆ.
ಮರಳು ಸಾಗಣೆ ಸಂಬಂಧ ಇದ್ದ ಸಮಸ್ಯೆಗಳನ್ನು ಈಡೇರಿಸುವ ಕುರಿತು ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆದೇಶ ಹೊರಡಿಸಿ ಒಂದುವಾರ ಕಳೆದರೂ ಲಾರಿ ಮಾಲಿಕ್ಪರಿಗೆ ಅಧಿಕಾರಿಗಳ ಕಿರುಕುಳ ತಪ್ಪಲಿಲ್ಲ.
ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ತಿಳಿಸಿದ್ದಾರೆ.
ಈ ನಡುವೆ ಅಧಿಕಾರಿಗಳ ಕಿರುಕುಳದ ಹಿನ್ನೆಲೆಯಲ್ಲಿ ರಾಮನಗರ ಮಿನಿವಿಧಾನ ಸೌಧ ಬಳಿ ನೂರಾರು ಲಾರಿಗಳನ್ನು ನಿಲ್ಲಿಸಿ ಲಾರಿ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.
|