ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಸ್ವಸಾಮರ್ಥ್ಯದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.
ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ ಪಕ್ಷದ ಅಧ್ಯಕ್ಷ ಡಿ.ವಿ.ಸದಾನಂದ ಗೌಡ, ಬಿಜೆಪಿ ತನ್ನ ಪಕ್ಷದ ಪ್ರಚಾರವನ್ನು ಈಗಿಂದಲೇ ಆರಂಭಿಸಲು ಸಿದ್ಧತೆ ನಡೆಸಿದೆ.
ಮೈಸೂರು, ದಾವಣಗೆರೆ, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡಗಳಲ್ಲಿ ಪಾಲಿಕೆಗಳ ಮೇಲೆ ದೃಷ್ಟಿ ಬೀರಿರುವ ಬಿಜೆಪಿ ಸ್ಥಳೀಯ ಶಾಸಕರು ಹಾಗೂ ಸಂಸದರ ನೇತೃತ್ವದ ಸಮಿತಿ ರಚಿಸಿದ್ದು ಪ್ರಚಾರದ ನೀಲ ನಕ್ಷೆ ಬಿಡುಗಡೆಗೊಂಡಿದೆ.
ಈ ನಡುವೆ ಜೆಡಿಎಸ್ ತನ್ನ ಸ್ವಂತ ಶಕ್ತಿಯಿಂದಲೇ ಚುನಾವಣೆ ಎದುರಿಸಲು ಯೋಜನೆ ನಡೆಸಿದ್ದು, ಸೆ.2ರಿಂದ ಮಾಜಿ ಪ್ರಧಾನಿ ದೇವೇಗೌಡರು ಈ ಸಂಬಂಧ ರಾಜ್ಯ ಪ್ರಚಾರ ಆರಂಭಿಸಲಿದ್ದಾರೆ.
ಆದರೆ ಅಕ್ಟೋಬರ್ 3ರ ಅಧಿಕಾರ ಹಸ್ತಾಂತರ ಪ್ರಕ್ರಿಯೆ ರಾಜ್ಯ ರಾಜಕಾರಣದಲ್ಲಿ ಮುಂದೇನು ಬದಲಾವಣೆ ತರುತ್ತದೆಯೋ ಕಾದು ನೋಡಬೇಕು.
|