ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ತಾರಕ್ಕೇರಿದ ಸಾತನೂರಿನ ರಾಜಕೀಯ ದ್ವೇಷ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವಣ ರಾಜಕೀಯ ದ್ವೇಷ ತಾರಕ್ಕೇರುವ ಘಟನೆಗಳು ನಡೆಯುತ್ತಿವೆ.

ತಮ್ಮನ್ನು ಸಂಪರ್ಕಿಸದೆ ತಮ್ಮ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿದ್ದರಿಂದ ಆರಂಭವಾದ ಈ ಜಗಳ ಗುರುವಾರ ತೀವ್ರ ಮಟ್ಟ ತಲುಪಿದೆ.

ಕಾರ್ಯಕ್ರಮ ನಡೆಯುವ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಾತನೂರಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಯಿತು. ಡಿಕೆಶಿ ಬೆಂಬಲಿಗರಾದ 30 ಜನರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ತಾವು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರೂ ತಮ್ಮ ಕ್ಷೇತ್ರದ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದರೆ ತಾವು ಏನು ಮಾಡಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಕೈಚೆಲ್ಲಿದಾಗ ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.

ಸುಮಾರು 2,000 ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದೇ ಮೊದಲಬಾರಿಗೆ ಮುಖ್ಯಮಂತ್ರಿಗಳು ಭಾಷಣ ಮಾಡಲಿರುವ ಸ್ಥಳದಲ್ಲಿ ಬುಲೆಟ್ ಪ್ರೂಫ್ ಗಾಜನ್ನು ಅಳವಡಿಸಲಾಗಿದೆ.

ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿರುವ ಯೋಜನೆಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡುವುದನ್ನು ಡಿಕೆಶಿ ಹಾಗೂ ಅವರ ಬೆಂಬಲಿಗರು ವಿರೋಧಿಸುತ್ತಿದ್ದಾರೆ.
ಮತ್ತಷ್ಟು
ಬಿಎಂಐಸಿ ಗುತ್ತಿಗೆ ರದ್ದು : ಸಚಿವ ಸಂಪುಟ ನಿರ್ಧಾರ
ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ಇಲ್ಲ
ದಿ.ರಾಮಕೃಷ್ಣ ಹೆಗಡೆ ಜನ್ಮ ದಿನ ಆಚರಣೆ
ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು
ಮತ್ತೆ ಮರಳು ಲಾರಿ ಮುಷ್ಕರ
ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು