ಕಾಂಗ್ರೆಸಿನ ಶಾಸಕ ಡಿ.ಕೆ. ಶಿವಕುಮಾರ್ ಅವರ ಗೂಂಡಾ ರೀತಿಯ ವರ್ತನೆಯನ್ನು ಸಮ್ಮಿಶ್ರ ಸರ್ಕಾರ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಎಚ್ಚರಿಸಿದ್ದಾರೆ.
ತಮ್ಮ ಬಳಿಯಿರುವ ಹಣದ ಬಲದಿಂದ ಕೆಲ ಗೂಂಡಾಗಳನ್ನು ಬಳಸಿಕೊಂಡು ರೌಡಿಯಿಸಂಗೆ ಇಳಿಯುವ ಆಟ ಇನ್ನು ನಡೆಯುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಸ್ಥಳೀಯ ಚುನಾವಣೆ ಸಂಬಂಧ ಗುರುವಾರವೂ ಬಿಜೆಪಿ ಸಭೆ ನಡೆದ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು ನೂರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಡಿಕೆಶಿ ಕಿರುಕುಳಕ್ಕೆ ಮುಂದಾಗುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
|