ಮಾಜಿ ಕ್ರಿಕೆಟಿಗ ಮಹಮದ್ ಅಜರುದ್ದೀನ್ ಅವರು ರಾಜಕೀಯ ಜೀವನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ನುಣುಚಿಕೊಂಡಿದ್ದಾರೆ.
ಇತ್ತೀಚೆಗೆ ಅವರ ಬೆಂಗಳೂರು ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದು, ಕಳೆದ ಎರಡು ಬಾರಿ ಜೆಡಿಎಸ್ ಪಕ್ಷದ ಸಮಾರಂಭಕ್ಕೆ ಆಗಮಿಸಿದ್ದರೆ ಗುರುವಾರ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಭಾರತದಲ್ಲಿ ಮೊದಲ ಬಾರಿಗೆ ಬ್ರಷ್ ಬಯಾಪ್ಸಿ ತಂತ್ರಜ್ಞಾನ ಆರಂಭಗೊಂಡಿದ್ದು ಅಜರುದ್ದೀನ್ ಇದಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜಕೀಯ ಕುರಿತಂತೆ ಕೇಳಲಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ನನ್ನ ರಾಜಕೀಯ ಬದುಕಿನ ಬಗ್ಗೆ ಇನ್ನೊಮ್ಮೆ ತಿಳಿಸುತ್ತೇನೆ ಎಂದೂ ತಿಳಿಸಿದರು.
|