ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
ಶಾಸಕರು ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಬೇಕಾಗಿತ್ತು. ನಿಯಮಗಳನುಸಾರ ಈ ಗಡುವನ್ನು ಎರಡು ತಿಂಗಳು ವಿಸ್ತರಿಸಿದ್ದು, ಆ ಗಡುವು ಶುಕ್ರವಾರ ಅಂತ್ಯಗೊಂಡಿದೆ. ಇದೀಗ ಆಸ್ತಿ ವಿವರ ಸಲ್ಲಿಸದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಲೋಕಾಯುಕ್ತರು ಹೇಳಿದ್ದಾರೆ.
ಆಸ್ತಿ ವಿವರ ಸಲ್ಲಿಸದ ಇಬ್ಬರು ಸಚಿವರನ್ನು ಕೈಬಿಡುವಂತೆ ಲೋಕಾಯುಕ್ತರು ನೀಡಿದ್ದ ಶಿಫಾರಸನ್ನು ಕಡೆಗಣಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರನ್ನು ಸಂಪುಟದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
|