ಗಣಿರೆಡ್ಡಿ ಎಂದೇ ಖ್ಯಾತರಾದ ವಿವಾದಾತ್ಮಕ ವಿಧಾನಪರಿಷತ್ ಸದಸ್ಯ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಗಣಿ ಪರವಾನಗಿಯನ್ನು ಆಂಧ್ರ ಪ್ರದೇಶ್ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಅಕ್ರಮ ಗಣಿಗಾರಿಕೆ ಕೂಡಲೇ ನಿಲ್ಲಿಸುವಂತೆ ತೆಲುಗುದೇಶಂ ಪಕ್ಷದ ಮುಖಂಡ ನಾಗಂ ಜನಾರೆಡ್ಡಿ ಎಂಬವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಇದೊಂದು ಅಕ್ರಮ ಗಣಿಗಾರಿಕೆ ಎಂದು ಆರೋಪಿಸಿ ಅದರ ಸತ್ಯಾಸತ್ಯತೆಯನ್ನು ಅರಿಯಲು ಆಂಧ್ರ ಪ್ರದೇಶದ ಟಿಡಿಪಿಯ ಹಲವರು ಶಾಸಕರು ಓಬಳಾಪುರಂ ಗಣಿ ಬಳಿ ಇತ್ತೀಚಿಗೆ ಬಂದಿದ್ದಾಗ ವಿವಾದ ಉಂಟಾಗಿತ್ತು. ಅವರನ್ನು ಪೊಲೀಸರು ಬಂಧಿಸಿದ್ದರು. ಓಬಳಾಪುರಂ ಗಣಿಯ ಸಂಬಂಧ ಸಚಿವ ಶ್ರೀರಾಮುಲು ಅವರು ಅರಣ್ಯಾಧಿಕಾರಿಯೊಬ್ಬರನ್ನು ನಿಂದಿಸಿದ್ದರು. ಅದರ ಸಂಬಂಧ ಪೊಲೀಸರಲ್ಲಿ ದೂರು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
|