ಶಾಲೆಯೊಂದರ ಬಾವಿ ಕಟ್ಟೆ ಮೇಲೆ ಕುಳಿತು ಊಟ ಮಾಡುತ್ತಿದ್ದ 9 ವರ್ಷದ ಬಾಲಕಿಯೊಬ್ಬಳನ್ನು ಅಪರಿಚಿತ ಯುವಕನೊಬ್ಬ ಬಾವಿಗೆ ತಳ್ಳಿದ ಘಟನೆ ಶುಕ್ರವಾರ ಹಾವೇರಿಯಲ್ಲಿ ನಡೆದಿದೆ.
ಸುಮಾರು 20 ಅಡಿ ಆಳವಿದ್ದ ಬಾವಿಯಲ್ಲಿ ಹೆಚ್ಚು ನೀರು ಇರಲಿಲ್ಲವಾದ್ದರಿಂದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಆಕೆಯನ್ನು ಬಾವಿಯಿಂದ ಮೇಲೆ ತಂದು ರಕ್ಷಿಸಿದ್ದರೂ ಆಘಾತಕ್ಕೆ ಒಳಗಾಗಿರುವ ಬಾಲಕಿ ಏನೂ ಮಾತನಾಡದ ಸ್ಥಿತಿಯಲ್ಲಿದ್ದಾಳೆ.
|