ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೋಲಾರದಲ್ಲಿ ಗಾಳಿಯಲ್ಲಿ ಗುಂಡು
ಕೋಲಾರ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳವೊಂದು ಹಿಂಸೆಗೆ ತಿರುಗಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಅತ್ಯಂತ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಯುವಕರಿಗೆ ಬುದ್ದಿಮಾತು ಹೇಳಿದ್ದು ಘಟನೆ ಕಾರಣವಾಯಿತು.

ಈ ಘಟನೆ ಎರಡು ಕೋಮುಗಳ ನಡುವಿನ ಕದನವಾಗಿ ಮಾರ್ಪಟ್ಟು ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಬೇಕಾಯಿತು. ಘಟನೆಯಿಂದ ಗ್ರಾಮಾ ನಂತರ ಠಾಣೆಯ ವೃತ್ತ ನಿರೀಕ್ಷಕ ಸತ್ಯನಾರಾಯಣ ಕುದೂರ್ ಅವರ ಎಡಗಣ್ಣಿಗೆ ತೀವ್ರತರದ ಗಾಯಗಳಾಗಿವೆ.

ಘಟನೆಗೆ ಸಂಬಂಧಿಸಿ ಕೋಲಾರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ಉದ್ವಿಗ್ನದಿಂದ ಕೂಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಎಸ್ಪಿ ದಯಾನಂದ್ ನೇತೃತ್ವದ ಪೊಲೀಸರ ತಂಡ ಶ್ರಮಿಸುತ್ತಿದೆ.

ಈ ನಡುವೆ ತಪ್ಪಿತಸ್ಥ ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ಹಿಂದೂ ಸಂಘಟನೆಗಳು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿವೆ. ಈ ನಡುವೆ ಪರಿಸ್ಥಿತಿಯನ್ನು ಶಮನಗೊಳಿಸಲು ಹೆಚ್ಚುವರಿ ಪೊಲೀಸರನ್ನು ಕೋಲಾರಕ್ಕೆ ಕರೆಸಲಾಗಿದೆ.
ಮತ್ತಷ್ಟು
ಸಿಎಂ ವಿರುದ್ಧ ಧರಂ ಗರಂ
ಬಾಲಕಿಯನ್ನೇ ಬಾವಿಗೆ ತಳ್ಳಿದ ಭೂಪ
ರೌಡಿ ಸೆರೆ ಒತ್ತಾಯಿಸಿ ಬೆಳಗಾವಿ ಬಂದ್
ರೆಡ್ಡಿ ಗಣಿ ಪರವಾನಗಿ: ಹೈಕೋರ್ಟ್ ರದ್ದು
ಶಾಸಕರ ವಿರುದ್ಧ ಲೋಕಾಯುಕ್ತ ಮೊಕದ್ದಮೆ
ತಾಯಿಯನ್ನು ಬೀದಿಗೆ ತಂದು ನಿಲ್ಲಿಸಿದ ಡಿಕೆಶಿ: ಸಿಎಂ