ಉಪಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ತಮಗಿರುವ ಬೇಸರವನ್ನು ಶುಕ್ರವಾರ ಸಂಜೆ ಹಾಸನದಲ್ಲಿ ಬಹಿರಂಗವಾಗಿಯೇ ಹೇಳುವ ಮುಖೇನ ತೋರಿಸಿಕೊಂಡರು.
ತಿಪಟೂರು ತಾಲೂಕಿನ ದಸರೀ ಘಟ್ಟ ಚೌಡೇಶ್ವರೀ ದೇವಾಲಯದ ರಾಜಗೋಪುರ ಉದ್ಘಾಟನೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ ಅಧಿಕಾರ ಹಸ್ತಾಂತರಕ್ಕೆ ಇನ್ನೂ 32 ದಿನಗಳಿದ್ದು ಉಪ ಮುಖ್ಯಮಂತ್ರಿ ಅತ್ಯಂತ ಅವಸರ ಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಟೋಬರ್ 2ರ ನಂತರ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆ ಅದು ದೈವೇಚ್ಛೆ. ಆದರೆ ಹಣೆಬರಹದಲ್ಲಿ ಅಧಿಕಾರ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಹೇಳಿರುವುದು ಬಿಜೆಪಿ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.
ದಸರೀಘಟ್ಟದ ಚೌಡೇಶ್ವರೀದೇವಿ ನೀವೇ ಮುಖ್ಯಮಂತ್ರಿಯಾಗಿ ಎಂದು ಅನುಗ್ರಹಿಸಿದ್ದಾಳೆ. ಆದರೆ ನಾನು ಸಮ್ಮಿಶ್ರ ಸರ್ಕಾರದ ಮೊದಲಿನ ಒಪ್ಪಂದಕ್ಕೆ ಬದ್ಧ ಎಂದೂ ಹೇಳಿದರು.
|