ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ಬೇಂದ್ರೆಯವರ ಸಾಧನಕೇರಿ ಪ್ರವಾಸೀ ತಾಣವಾಗಿ ಕಂಗೊಳಿಸಲಿದೆ. ಸಾಹಿತಿಗಳ ನೆಲೆವೀಡಾಗಿ ಹೆಸರು ಮಾಡಿರುವ ದಾರವಾಡದ ನೆಲದಲ್ಲಿ ಬೇಂದ್ರೆಯವರ ಸಾಧನ ಕೇರಿ ಎಲ್ಲರ ಆಕರ್ಷಣೆಯ ತಾಣವಾಗಿ ರೂಪುಗಳ್ಳಲಿದೆ.
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಾಧನಕೇರಿಯ ಅಭಿವೃದ್ಧಿಗೆ 2 ಕೋಟಿ ರೂಗಳನ್ನು ನೀಡಿದ್ದು, ಒಟ್ಟು 10 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ಕೆರೆ ಸೌಂದರ್ಯ, ಸುತ್ತಮುತ್ತಲಿನ ಪ್ರದೇಶವನ್ನು ಸರ್ವಾಂಗ ಸುಂದರವಾಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದ್ದು, ಈ ಪ್ರದೇಶವನ್ನು ಸಸ್ಯ ಮತ್ತು ಪಕ್ಷಿ ಸಂಕುಲಗಳ ಪ್ರದೇಶವನ್ನಾಗಿ ರೂಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.
ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ತಿಳುವಳಿಕೆ ನೀಡುವುದು ಜಿಲ್ಲಾಡಳಿತದ ಉದ್ದೇಶ.
ಈ ವರೆಗೆ ಬೇಂದ್ರೆಯವರ ನೆನಪಿನ ಸಾಧನಕೇರಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿರಲಿಲ್ಲ. ಆದರೆ ಸರ್ಕಾರದ ಮುತುವರ್ಜಿಯಿಂದಾಗಿ ಸಾಧನಕೇರಿ ಸಾಧನೆಯ ಪಥದಲ್ಲಿ ಮುಂದುವರಿದಿರುವುದು ಸಾಹಿತ್ಯಾಸಕ್ತರಿಗೆ ಖುಷಿ
|