ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಆಸ್ತಿ ವಿವರ ಸಲ್ಲಿಸಿದ ಶಾಸಕರು
ಲೋಕಾಯುಕ್ತಕ್ಕೆ ಶಾಸಕರು ಆಸ್ತಿ ವಿವರ ಸಲ್ಲಿಸುವ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕೈಗೊಂಡ ಕ್ರಮಗಳಿಂದಾಗಿ ಈ ಬಾರಿ ಅವಧಿಗೆ ಮುನ್ನವೇ ಒಬ್ಬರು ಹೊರತುಪಡಿಸಿ ಎಲ್ಲ ಶಾಸಕರು ವಿವರ ಸಲ್ಲಿಸಿದ್ದಾರೆ.

ಇತ್ತೀಚಿಗೆ ಮಹಾರಾಷ್ಟ್ತ್ರ ಪೊಲೀಸರಿಂದ ಬಂಧನಕ್ಕೆ ಒಳಗಾದ ವಿವಾದಿತ ಶಾಸಕ ಇಂಡಿ ಕ್ಷೇತ್ರದ ರವಿಕಾಂತ ಪಾಟಿಲ್ ಇನ್ನೂ ಆಸ್ತಿ ವಿವರ ಸಲ್ಲಿಸಿಲ್ಲ.

ಪ್ರಸಕ್ತ ಸಾಲಿನ ಜೂ. 30ಕ್ಕೆ ಆಸ್ತಿ ವಿವರ ಸಲ್ಲಿಸಲು ಮೊದಲ ಅವಧಿ ಮುಗಿದಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ 13 ಶಾಸಕರು ಮತ್ತು 8 ವಿಧಾನಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿರಲಿಲ್ಲ.

ಇದನ್ನು ಗಂಭಿರವಾಗಿ ಪರಗಣಿಸಿದ್ದ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದರು. ಶುಕ್ರವಾರ ಸಂಜೆ 5.30ರೊಳಗೆ ವಿವರ ಸಲ್ಲಿಸದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುದಾಗಿ ನೋಟಿಸ್ ಜಾರಿ ಮಾಡಿದ್ದರು.
ಮತ್ತಷ್ಟು
ವಿದ್ಯುತ್ ಘಟಕ ಸ್ಥಾಪನೆ: ಸರ್ಕಾರದ ಬಿಗಿಪಟ್ಟು
31 ಲಕ್ಷ ಬಿಪಿಎಲ್ ಕಾರ್ಡ್‌ಗಳಿಗೆ ಕೇಂದ್ರದ ಅನುಮೋದನೆ
ಬೇಂದ್ರೆಯವರ ಸಾಧನ ಕೇರಿ ಇನ್ನು ಪ್ರವಾಸೀ ತಾಣ
ಡಿಸಿಎಂ ಬಗ್ಗೆ ಸಿಎಂ ಅಸಮಧಾನ
ಕೋಲಾರದಲ್ಲಿ ಗಾಳಿಯಲ್ಲಿ ಗುಂಡು
ಸಿಎಂ ವಿರುದ್ಧ ಧರಂ ಗರಂ