ಸರ್ಕಾರಕ್ಕೆ ಆದಾಯ ನಷ್ಟವನ್ನುಂಟುಮಾಡುವ ಸಾರಾಯಿ ನಿಷೇಧಕ್ಕೆ ಕಾರಣ ಕರ್ತರಾದ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲೇ ನಕಲಿ ಸಾರಾಯಿ ಮಾರಾಟವಾಗುತ್ತಿರುವುದು ಅವರಿಗೆ ಅಸಮಾಧಾನವಾಗಿದೆ.
ತಮ್ಮ ಕ್ಷೇತ್ರದಲ್ಲಿ ನಕಲಿ ಸಾರಾಯಿ ದೊರೆಯುತ್ತಿದೆ ಎಂದು ಅವರೇ ಖುದ್ದಾಗಿ ತಿಳಿಸಿರುವುದರಿಂದ ರಾಜ್ಯಾದ್ಯಂತ ಸಾರಾಯಿ ನಿಷೇಧ ಸಕ್ರಮವಾಗಿ ಜಾರಿಗೊಳ್ಳುತ್ತಿಲ್ಲ ಎಂಬುದು ಖಚಿತವಾಗಿದೆ.
ಸಾರಾಯಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ವಿಫಲವಾಗುವ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಮನೆಗೆ ಕಳುಹಿಸುವುದಾಗಿ ಅವರು ಎಚ್ಚರಿಸಿದ್ದಾರೆ.
|