ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೇಕಾಬಿಟ್ಟಿ ಶಿಲಾನ್ಯಾಸಗಳಿಗೆ ಕಡಿವಾಣ
ಯಾವುದೇ ಯೋಜನೆಯಾಗಲಿ ತಾಂತ್ರಿಕ ಅನುಮತಿ ಹಣಕಾಸು ಮಂಜೂರಾತಿ ಅಗತ್ಯ. ಆದರೆ ರಾಜಕೀಯ ಪ್ರಯೋಜನೆ ಬಯಸುವ ರಾಜಕಾರಣಿಗಳು ಯೋಜನೆ ಸಿದ್ಧಗೊಳ್ಳದೇ ಶಿಲಾನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸುವುದು ವಾಡಿಕೆಯಾಗುತ್ತಿದೆ.

ಇಂಥ ಶಿಲಾನ್ಯಾಸಗಳಿಗೆ ಕೇಂದ್ರು ಆಡಳಿತ ಸುಧಾರಣಾ ಆಯೋಗ ಕಡಿವಾಣ ಹಾಕಲು ನಿರ್ಧರಿಸಿದೆ. ಇತ್ತೀಚಿಗೆ ರಾಜ್ಯದ ಹಲವೆಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಲಾನ್ಯಾಸಗಳನ್ನು ಯಾವುದೇ ಅನುಮತಿ ಇಲ್ಲದೇ ಸುಮ್ಮನೆ ನೆರವೇರಿಸುತ್ತಿರುವ ಬಗ್ಗೆ ಆಡಳಿತೆ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಣಾಮಕಾರಿಯಾದ ಸಲಹೆಗಳನ್ನು ಆಯೋಗ ವರದಿಯಲ್ಲಿ ಸೂಚಿಸುವ ಉದ್ದೇಶದಿಂದ ದೆಹಲಿಯಲ್ಲಿ ಅಕ್ಟೋಬರ್‍‌ನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗುವುದು. ಇದರಲ್ಲಿ ಜಾಗತಿಕ ಮಟ್ಟದ ಆರ್ಥಿಕ ತಜ್ಞರು ಭಾಗವಹಿಸಲಿದ್ದು, ಅವರು ನೀಡುವ ಸಲಹೆಗಳನ್ನು ಆಧರಿಸಿ ಬೇಕಾಬಿಟ್ಟಿ ಶಿಲಾನ್ಯಾಸ ಮಾಡುವುದನ್ನು ನಿಯಂತ್ರಿಸಲು ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಸ್ಥಳಿಯ ಸಂಸ್ಥೆಗಳಿಗೆ ಏಕಾಂಗಿ ಸ್ಪರ್ಧೆ: ಜೆಡಿ (ಎಸ್)
ಅಧಿಕಾರ ಹಸ್ತಾಂತರಕ್ಕೆ ಬದ್ದ: ಕುಮಾರಸ್ವಾಮಿ
ಅಪರೂಪಕ್ಕೆ ಕೆರೆ ಭರ್ತಿ
ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇಮಕ
ಬಿ.ಎಸ್.ಯಡಿಯೂರಪ್ಪ ಕ್ಷೇತ್ರದಲ್ಲೇ ನಕಲಿ ಸಾರಾಯಿ ಮಾರಾಟ
ಆಸ್ತಿ ವಿವರ ಸಲ್ಲಿಸಿದ ಶಾಸಕರು