ಆರ್ಕುಟ್ ಸಮುದಾಯ ಜಾಲದಲ್ಲಿ ಶಿವಾಜಿ ಬಗ್ಗೆ ಅವಹೇಳನಕಾರೀ ಬರಹ ಬರೆದ ಆರೋಪದಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಅನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಈ ರೀತಿಯ ಅವಮಾನಕಾರಿ ಬರಹಗಳನ್ನು ಬರೆದಿರುವ ಬಗ್ಗೆ ಕಳೆದ ನವೆಂಬರ್‌ನಲ್ಲಿ ಪೊಲೀಸರಿಗೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದರು.
ಕೇಂದ್ರ ಸೈಬರ್ ಅಪರಾಧ ನಿಯಂತ್ರಣ ವಿಭಾಗ ಈ ಸಂಬಂಧ ಹೆಚ್ಚಿನ ತನಿಖೆ ಆರಂಭಿಸಿತ್ತು. ಆತನ ಬಗ್ಗೆ ಸೈಬರ್ ಪೊಲೀಸರ ತಂಡವು ಬೆಂಗಳೂರಿನ ಗೂಗಲ್ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿತ್ತು. ಆರೋಪಿ ಬೆಂಗಳೂರು ಮೂಲದ ಲಕ್ಷ್ಮಣ್ ಅನ್ನು ಬಂಧಿಸಲಾಗಿದೆ.
ಈ ನಡುವೆ ಅಂತರ್ಜಾಲದ ಮುಖೇನ ಈ ರೀತಿಯ ಕಾರ್ಯ ನಡೆಸುವವರ ಬಗ್ಗೆ ರಾಜ್ಯದಲ್ಲೂ ಸೈಬರ್ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
|