ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಆನ್‌ಲೈನ್ ಮತದಾರರ ಪಟ್ಟಿ : ರಾಜ್ಯ ಅಗ್ಗಳಿಕೆ
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ, ಹಾಗಾಗಿ ಮತ ಚಲಾಯಿಸಲು ಸಾಧ್ಯವಾಗಿಲ್ಲ, ತಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಮತದಾರರು ಇನ್ನುಮುಂದೆ ಹಿಡಿಶಾಪ ಹಾಕುವಂತಿಲ್ಲ.

ಈ ಅವ್ಯವಸ್ಥೆಗೆ ಕಡಿವಾಣ ಹಾಕಲು ದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯದಲ್ಲಿ ಆನ್‌ಲೈನ್ ಪದ್ಧತಿ ಜಾರಿಗೆ ಬರುತ್ತಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆ? ವರ್ಗಾವಣೆಗೊಂಡ ಊರಿನಲ್ಲಿ ಮತದಾನದ ಹಕ್ಕು ಪಡೆಯಬೇಕೆ? ಇದಕ್ಕೆ ಅರ್ಜಿ ಕೊಟ್ಟು ತಿಂಗಳುಟ್ಟಲೆ ಕಾಯಬೇಕಿಲ್ಲ. ಈ ವ್ಯವಸ್ಥೆಯ ಮೂಲಕ ಕೇವಲ ಎರಡೇ ನಿಮಿಷದಲ್ಲಿ ಮತದಾರರರ ಪಟ್ಟಿಯಲ್ಲಿ ಹೆಸರು ಸೇರಿಕೊಳ್ಳುತ್ತದೆ.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿದೆಯೋ ಇಲ್ಲವೋ ಎಂದು ನೋಡಲೂ ಬಹುದು. ದೋಷಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿದರೆ ತಕ್ಷಣವೇ ಅದನ್ನು ಸರಿಪಡಿಸಲಾಗುವುದು.

ಇದರಲ್ಲೊಂದು ವಿಶೇಷವಿದೆ. ಈ ಪದ್ಧತಿ ದೇಶ ಬೇರೆ ಯಾವ ರಾಜ್ಯಗಳಲ್ಲೂ ಜಾರಿಯಾಗಿಲ್ಲ. ಕರ್ನಾಟಕದಲ್ಲಿ ಈ ಪ್ರಯತ್ನಕ್ಕೆ ಕೈಹಾಕಲಾಗಿದೆ. ಅದಕ್ಕೆ ಸಿದ್ಧತೆ ನಡೆಸಲಾಗಿದೆ.
ಮತ್ತಷ್ಟು
ಪೌರ ಚುನಾವಣೆಗೆ ಸಜ್ಜಾಗುತ್ತಿರುವ ಪಕ್ಷಗಳು
ಸೈಬರ್ ಅಪರಾಧ: ಬೆಂಗಳೂರಿಗನ ಸೆರೆ
ಬೇಕಾಬಿಟ್ಟಿ ಶಿಲಾನ್ಯಾಸಗಳಿಗೆ ಕಡಿವಾಣ
ಸ್ಥಳಿಯ ಸಂಸ್ಥೆಗಳಿಗೆ ಏಕಾಂಗಿ ಸ್ಪರ್ಧೆ: ಜೆಡಿ (ಎಸ್)
ಅಧಿಕಾರ ಹಸ್ತಾಂತರಕ್ಕೆ ಬದ್ದ: ಕುಮಾರಸ್ವಾಮಿ
ಅಪರೂಪಕ್ಕೆ ಕೆರೆ ಭರ್ತಿ