ಬಿಜೆಪಿಯ ಮೇಲೆ ತೂಗು ಕತ್ತಿ ನೇತಾಡುತ್ತಿದೆ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಅವರ ಪಕ್ಷದ ಸಂಘಟನೆಗಾಗಿ ಮಿರಾಜುದ್ದೀನ್ ಪಟೇಲ್ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅದು ಇತರ ಪಕ್ಷಗಳಿಗೆ ಆತಂಕ ಸೃಷ್ಟಿಸಿದೆ ಎಂಬುದು ದೇವೇಗೌಡರ ಮಾತಿನ ಅರ್ಥ ಇರಬಹುದು. ಅದಕ್ಕೆ ಗಂಭೀರ ಅರ್ಥ ಕಲ್ಪಿಸಬೇಕಾದ ಅವಶ್ಯವಿಲ್ಲ ಎಂದು ಹೇಳಿದ್ದಾರೆ.
|