ಬೆಳಗಾವಿ ಪೊಲೀಸರು ಮತ್ತು ಪ್ರವೀಣ ಶಿಂತ್ರೆ ನಡುವೆ ಕ್ಷಣಕಾಲ ರೌಡಿ ವಾಸವಾಗಿದ್ದ ಬಾಡಿಗೆಯ ಮನೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬೆಳಗಾವಿಯ ಕುಖ್ಯಾತ ಸರಣಿ ಹಂತಕ ಪ್ರವೀಣ ಶಿಂತ್ರೆ ಪೊಲೀಸರಿಗೆ ಆಹುತಿಯಾಗಿದ್ದಾನೆ.
ಬುಧವಾರ ರಾತ್ರಿ ಪ್ರವೀಣ ಶಿಂತ್ರೆಯನ್ನು ಉಡುಪಿಯಲ್ಲಿ ಬಂಧಿಸಿ, ಬೆಳಗಾವಿಗೆ ಕರೆತಂದ ಕೆಲವೇ ಗಂಟೆಗಳ ಅವಧಿಯಲ್ಲಿ ಗುಂಡಿನ ಚಕನಮಕಿ ನಡೆದಿದೆ.
ಬೆಳಗಾವಿಯ ಖ್ಯಾತ ರೌಡಿ ಪೊಲೀಸರಿಗೆ ಒಟ್ಟು 38 ಅಫರಾಧ ಪ್ರಕರಣಗಳಲ್ಲಿ ಬೇಕಾಗಿದ್ದ. ಈ ಪ್ರಕರಣಗಳಲ್ಲಿ ಕೆಲವು ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಪಟ್ಟಿವೆ.ಬೆಳಗಾವಿಯ ವಿಶೇಷ ಪೊಲೀಸರ ತಂಡವು ಕುಖ್ಯಾತ ರೌಡಿಯನ್ನು ಉಡುಪಿಯಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಬೆಳಗಾವಿಗೆ ಆಗಮಿಸಿದ ನಂತರ ರೌಡಿಯನ್ನು ಅವನು ವಾಸವಾಗಿದ್ದ, ಬಾಡಿಗೆ ಮನೆಗೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಪೊಲೀಸರತ್ತ ಗುಂಡು ಹಾರಿಸುವ ಪ್ರಯತ್ನವನ್ನು ಪ್ರವೀಣ ಶಿಂತ್ರೆ ಮಾಡಿದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡಿನ ಚಕಮಕಿಯಲ್ಲಿ ಶಹಾಪೂರ ಪೋಲಿಸ್ ಠಾಣೆ ಇನ್ಸಪೆಕ್ಟರ್ ನಾಗರಾಜ್ ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾಗಿದ್ದು. ಪೊಲೀಸರು ನಡೆಸಿದ ಗುಂಡಿನ ಪ್ರತಿದಾಳಿಗೆ ಶಿಂತ್ರೆ ಸ್ಥಳದಲ್ಲಿ ಮೃತಪಟ್ಟನು ಎಂದು ತಿಳಿದು ಬಂದಿದೆ.
|