ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಮಾಡಿರುವ ಆರೋಪಗಳಿಗೆ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊದ್ದಮೆ ಹೂಡಲಾಗುವುದೆಂದು ಕೆಎಸ್ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಎಚ್ಚರಿಸಿದ್ದಾರೆ.
ಇದರೊಂದಿಗೆ ಕೆಎಸ್ಸಿಎಗೆ ನಡೆಯಲಿರುವ ಚುನಾವಣಾ ಕಣದಲ್ಲಿ ರಣೋತ್ಸಾಹ ಮುಗಿಲುಮುಟ್ಟಿದೆ. ಆರೋಗ್ಯಕರ ಸ್ಪರ್ಧೆಯಲ್ಲಿ ಒಡೆಯರ್ ಅವರು ಜಯಗಳಿಸುವುದು ಬಿಟ್ಟು ತಮಗೆ ಅಪಮಾನಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೆಎಸ್ಸಿಎ ವ್ಯವಹಾರಗಳನ್ನು ಕುರಿತ ಎಲ್ಲಾ ದಾಖಲೆಗಳೊಂದಿಗೆ ತಮ್ಮನ್ನು ಸವ್ಮರ್ಥಿಸಿಕೊಂಡಿದ್ದಾರೆ.
ಮಾನನಷ್ಟ ಮೊಕದ್ದಮೆ ಹೂಡುವ ಬ್ರಿಜೇಶ್ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ ಶ್ರೀಕಂಠದತ್ತ ಒಡೆಯರ್, ತಾವೂ ಯಾವ ಕಾನೂನು ಸಮರಕ್ಕು ಸಿದ್ಧ ಎಂದು ಘೋಷಿಸಿದ್ದಾರೆ.
ಅಕ್ರಮಗಳನ್ನು ಮರೆಮಾಚಲು ಅವರು ಮಾನನಷ್ಟ ಮೊಕದ್ದಮೆಯ ಸವಾಲೇಸೆಯಲಾಗಿದೆ ಎಂಬುದೇ ತಮ್ಮ ಅಭಿಪ್ರಾಯ. ಇಂಥ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.
|