ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಪರಿಹಾರ ಕಾಣದ ಶಿಕ್ಷಕರ ಸಮಸ್ಯೆ
ಗುರುವಿನ ಗುಲಾಮನಾಗುವ ತನಕ ದೊರೆಯದಯ್ಯಾ ಮುಕುತಿ ಎಂಬಂತೆ ಬುಧವಾರ ರಾಜ್ಯಾದ್ಯಂತ ಶಿಕ್ಷಕರ ದಿನಾಚರಣೆ ನಡೆದಿದೆ.

ಗುಲ್ಬರ್ಗಾದಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು 43 ಶಿಕ್ಷಕರಿಗೆ ಉತ್ತಮ ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಕರ ದಿನಾಚರಣೆ ವೈಭವವಾಗಿ ನಡೆದರೂ ಶಿಕ್ಷಕ ಸಮುದಾಯವನ್ನು ಕಾಡುತ್ತಿರುವ ಸಮಸ್ಯೆಗಳು ಹಾಗೇ ಮುಂದುವರೆದಿವೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶಿಕ್ಷಕರ ನೇಮಕದ ಪ್ರಕ್ರಿಯೆ ಆರಂಭವಾಗಿದೆ. ಆ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರ ನೇಮಕವಾಗುವುದರಿಂದ ಹಳೇ ಮೈಸೂರಿನ ನಿರುದ್ಯೋಗಿ ಶಿಕ್ಷಕರು ಅಲ್ಲಿಗೆ ಗುಳೆ ಹೋಗಲು ಸಿದ್ಧತೆ ನಡೆಸಿದ್ದಾರೆ.

1987ಕ್ಕೂ ಮುಂಚೆ ರಾಜ್ಯಾದ್ಯಂತ ಅಸ್ತಿತ್ವಕ್ಕೆ ಬಂದಿರುವ ಸಾಮಾನ್ಯ ಆಡಳಿತ ಮಂಡಳಿಗಳು ನಡೆಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆ ಬಂದಷ್ಟೇ ಸಂಬಳ ಎಂಬಂತಾಗಿದೆ.

ಸರ್ಕಾರದ ಅನುದಾನ ಬಾರದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಗಳು ತಮಗೆ ಸರಿ ಎನಿಸಿದ್ದನ್ನು ಸಂಬಳ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ಮತ್ತಷ್ಟು
ಸುದ್ದಿಯಲ್ಲಿ ಮತ್ತೆ ನಕ್ಸಲರು
ರಂಗೇರಿದ ಕೆಎಸ್ಸಿಎ ಚುನಾವಣೆ
ಬೆಳಗಾವಿ: ಎನ್‌‌ಕೌಂಟರ್‌ಗೆ ಶಿಂತ್ರೆ ಬಲಿ
ಕುರುಬರಿಗೆ ಸಿಎಂ ಕಿರುಕುಳ: ವಿಶ್ವನಾಥ್
ಹೈದರಾಬಾದ್ ಸ್ಫೋಟ: ಶಂಕಿತರಿಗೆ ಮಂಪರು ಪರೀಕ್ಷೆ
ರಾಜ್ಯದಲ್ಲಿ ಜನ್ಮಾಷ್ಟಮಿ ಸಂಭ್ರಮ